ಆರೋಗ್ಯಕಾರಿ ಕರ್ಬೂಜ ಹಣ್ಣಿನ ಬಗ್ಗೆ ನಿಮಗೆಷ್ಟು ಗೊತ್ತು? - BC Suddi
ಆರೋಗ್ಯಕಾರಿ ಕರ್ಬೂಜ ಹಣ್ಣಿನ ಬಗ್ಗೆ ನಿಮಗೆಷ್ಟು ಗೊತ್ತು?

ಆರೋಗ್ಯಕಾರಿ ಕರ್ಬೂಜ ಹಣ್ಣಿನ ಬಗ್ಗೆ ನಿಮಗೆಷ್ಟು ಗೊತ್ತು?

ಇನ್ನೇನು ಬೇಸಿಗೆ ಶುರುವಾಯಿತು.. ಬಿಸಿಲುಗಾಲ ಪ್ರಾರಂಭವಾಯಿತೆಂದರೆ ಹೊಟ್ಟೆ ನೋವು.. ಅಜೀರ್ಣ ಸಮಸ್ಯೆಗಳು,,, ಅತಿ ದಾಹ ಇವೆಲ್ಲ ಸಾಮಾನ್ಯವಾಗಿ ಕಾಡುವ ಸಮಸ್ಯೆಗಳು..

ಇದಕ್ಕೆ ಕೆಲವೊಂದು ಮನೆಯಲ್ಲೇ ಮಾಡಿಕೊಳ್ಳಬಹುದಾದ ಅಂತಹ ಪರಿಹಾರಗಳನ್ನು ತಿಳಿಯಿರಿ…

ಬೇಸಿಗೆಯಲ್ಲಿ ಮಾರ್ಕೆಟ್ ಗಳಲ್ಲಿ ಅತಿ ಹೇರಳವಾಗಿ ಸಿಗುವಂತಹ ಹಣ್ಣು ಕರ್ಬುಜ.. ಕರಬೂಜ ಪಾನೀಯ ಸೇವನೆಯಿಂದ ಹೊಟ್ಟೆಯನೋವು ಉರಿ ಕಡಿಮೆಯಾಗುತ್ತದೆ.

ಕರಬೂಜ ರಸ ಮತ್ತು ನಿಂಬೆ ರಸವನ್ನು ಎರಡೆರಡು ಚಮಚ ಮಿಶ್ರಣ ಮಾಡಿಕೊಂಡು ಕುಡಿದರೆ ಅಜೀರ್ಣ ಕಡಿಮೆಯಾಗುತ್ತದೆ. ಇಲ್ಲದಿದ್ದರೆ ಕರ್ಬೂಜದ 1ಲೋಟ ಜ್ಯೂಸ್ ಗೆ ಸ್ವಲ್ಪ ನಿಂಬೆ ಹಣ್ಣು ಹಿಂಡಿಕೊಂಡು ಕೂಡ ಕುಡಿಯಬಹುದು..

ಪ್ರತಿನಿತ್ಯ ಕರಬೂಜ ಹಣ್ಣನ್ನು ಸೇವಿಸಿದರೆ ದೇಹದಲ್ಲಿರುವ ಅನಗತ್ಯ ಕೊಬ್ಬು ನಿವಾರಣೆಯಾಗುತ್ತದೆ.

ಕರಬೂಜ ಹಣ್ಣನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಯಾವುದೇ ಆರೋಗ್ಯ ಸಮಸ್ಯೆಗಳು ಇರುವುದಿಲ್ಲ..

ಕರಬೂಜ ಹಣ್ಣಿನಲ್ಲಿ ಆಂಟಿಆಕ್ಸಿಡೆಂಟ್ ಗಳು ಮತ್ತು ವಿಟಮಿನ್ ಸಿ ಹೇರಳವಾಗಿದ್ದು ಇವು ಹೊಟ್ಟೆಯ ಆಮ್ಲೀಯತೆಯನ್ನು ಕಡಿಮೆಗೊಳಿಸುತ್ತದೆ.. ಕರ್ಬುಜ ದಲ್ಲಿ ಬಿಳಿಯ ಕರ್ಬುಜ, ಕೇಸರಿ ಬಣ್ಣದ ಕರ್ಬುಜ ಎಂದು ಎರಡು ಬಗೆಯಲ್ಲಿ ಸಿಗುತ್ತದೆ.. ಬೇಸಿಗೆಯಲ್ಲಿ ಕರಬೂಜದ ಪಾನಕ ಹೇರಳವಾಗಿ ತೆಗೆದುಕೊಳ್ಳಬಹುದು.