ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಉತ್ತರಪ್ರದೇಶದ ಮಾಜಿ ಸಿಎಂ ಅಖಲೇಶ್‌ ಯಾದವ್‌‌ಗೆ ಕೊರೊನಾ  ದೃಢ - BC Suddi
ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಉತ್ತರಪ್ರದೇಶದ ಮಾಜಿ ಸಿಎಂ ಅಖಲೇಶ್‌ ಯಾದವ್‌‌ಗೆ ಕೊರೊನಾ  ದೃಢ

ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಉತ್ತರಪ್ರದೇಶದ ಮಾಜಿ ಸಿಎಂ ಅಖಲೇಶ್‌ ಯಾದವ್‌‌ಗೆ ಕೊರೊನಾ  ದೃಢ

ಲಕ್ನೋ: ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಉತ್ತರಪ್ರದೇಶದ ಮಾಜಿ ಸಿಎಂ ಅಖಲೇಶ್‌ ಯಾದವ್‌ ಅವರಿಗೆ ಬುಧವಾರ ಕೊರೊನಾ ದೃಢಪಟ್ಟಿದ್ದು, ಈ ಬಗ್ಗೆ ಟ್ವೀಟ್‌ ಮೂಲಕ ಸ್ವತಃ ಅವರೇ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, “ಕೊರೊನಾ ವರದಿಯಲ್ಲಿ ನನಗೆ ಸೋಂಕು ತಗುಲಿರುವುದಾಗಿ ದೃಢಪಟ್ಟಿದೆ. ಇದೀಗ ನಾನು ಮನೆಯಲ್ಲಿಯೇ ಐಸೋಲೇಷನ್‌ನಲ್ಲಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ” ಎಂದು ತಿಳಿಸಿದ್ದಾರೆ.

“ಕಳೆದ ಕೆಲವು ದಿನಗಳಿಂದ ನನ್ನೊಂದಿಗೆ ಸಂಪರ್ಕದಲ್ಲಿದ್ದವರು ಕೂಡಲೇ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡುತ್ತಿದ್ದೇನೆ. ಸಂಪರ್ಕದಲ್ಲಿರುವವರು ಕೆಲವು ದಿನಗಳವರೆಗೆ ಐಸೋಲೇಷನ್‌‌‌‌ನಲ್ಲಿರುವಂತೆ ಮನವಿ ಮಾಡಿಕೊಳ್ಳುತ್ತೇನೆ” ಎಂದಿದ್ದಾರೆ.

ಜೈಲಿನಲ್ಲಿ ಅಧಿಕಾರಿಗಳು ನನ್ನ ಕುರಾನ್‌‌ ಅಭ್ಯಾಸಕ್ಕೆ ತಡೆಹಿಡಿದಿದ್ದರು : ಅಲೆಕ್ಸಿ ನವಾಲ್ನಿ ಆರೋಪ