'ಹೆಚ್‌ಡಿಕೆ ಇರೋದೆ ಕಪ್ಪು, ಅವರನ್ನು ಬಿಳಿಯ ಅನ್ನೊಕಾಗುತ್ತಾ?' - ಜಮೀರ್ - BC Suddi
‘ಹೆಚ್‌ಡಿಕೆ ಇರೋದೆ ಕಪ್ಪು, ಅವರನ್ನು ಬಿಳಿಯ ಅನ್ನೊಕಾಗುತ್ತಾ?’ – ಜಮೀರ್

‘ಹೆಚ್‌ಡಿಕೆ ಇರೋದೆ ಕಪ್ಪು, ಅವರನ್ನು ಬಿಳಿಯ ಅನ್ನೊಕಾಗುತ್ತಾ?’ – ಜಮೀರ್

ಬೀದರ್: ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಅವರನ್ನು ಕರಿಯ ಎಂದು ಸಂಬೋಧಿಸಿದ ಕಾರಣ ಜೆಡಿಎಸ್‌ ನಾಯಕರ ಹಾಗೂ ಕಾರ್ಯಕರ್ತರ ಟೀಕೆ ಒಳಗಾಗಿದ್ದ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಇಂದು ಮತ್ತೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಮೀರ್, “ಕುಮಾರಸ್ವಾಮಿ ಅವರು ಇರೋದೇ ಕಪ್ಪು, ಹಾಗಾಗಿ ಬೆಳ್ಳಗೆ ಇರುವವರನ್ನು ಕರಿಯ ಎಂದು ಕರೆಯಲು ಆಗುತ್ತಾ?. ಅವರು ಕಪ್ಪು ಇರುವ ಕಾರಣ ಅವರನ್ನು ಕರಿಯ ಎಂದು ಕರೆದೆ. ನಾನು ಅವರನ್ನು ಕರಿಯ ಎಂದು ಕರೆದಿದ್ದು ತಪ್ಪು ಎಂದಾದರೆ ಅವರು ನನ್ನ ಮೇಲೆ ದೂರು ನೀಡಲಿ” ಎಂದಿದ್ದಾರೆ.

“ಜೆಡಿಎಸ್‌ ಕಾರ್ಯಕರ್ತರು ನನ್ನ ನಿವಾಸದ ಮುಂದೆ ಎರಡು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಅವರು ನನ್ನನ್ನು ಕುಳ್ಳ ಎಂದು ಕರೆಯುತ್ತಾರೆ, ದೇವರು ನನಗೆ ಹೈಟ್‌ ನೀಡಿಲ್ಲ. ಹಾಗಾಗಿ ಅವರು ನನ್ನನ್ನು ಕುಳ್ಳ ಎಂದು ಕರೆದರೆ ನನಗೆ ಬೇಸರವಿಲ್ಲ” ಎಂದು ಹೇಳಿದ್ದಾರೆ.

ಅಲ್ಲಾಹನ ಮೇಲೆ ನಂಬಿಕೆ ಇದ್ರೆ ಹಣ ಪಡೆದಿದ್ದು ಸಾಬೀತುಪಡಿಸಿ: ಜಮೀರ್‌ಗೆ ಹೆಚ್‌ಡಿಕೆ ಸವಾಲು

“ಹೆಚ್‌ಡಿಕೆ ಅವರು ವಿದೇಶದವರ ರೀತಿ ಇದ್ದರೆ ನಾನು ನೀಡಿದ ಹೇಳಿಕೆ ತಪ್ಪಾಗುತ್ತಿತ್ತು. ಹುಟ್ಟಿದಾಗಲೇ ದೇವರು ಅವರನ್ನು ಕರ್‍ರಗೆ ಮಾಡಿ ಭೂಮಿಗೆ ಕಳುಹಿಸಿದ್ದಾರೆ. ಹಾಗಾಗಿ ಅವರು ಕಪ್ಪಗೆ ಇದ್ದಾರೆ. ಹಾಗಾಗಿ ನನ್ನ ಹೇಳಿಕೆ ಹೇಗೆ ತಪ್ಪಾಗಲು ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ.

ಬಸವಕಲ್ಯಾಣದಲ್ಲಿ ಜೆಡಿಎಸ್‌ ಅಭ್ಯರ್ಥಿ ಕಣಕ್ಕಿಳಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, “ಕುಮಾರಸ್ವಾಮಿ ಅವರು ಯಾವುದೇ ಲಾಭವಿಲ್ಲದೆ ಯಾವುದೇ ಕಾರ್ಯವನ್ನು ಮಾಡುವವರಲ್ಲ” ಎಂದಿದ್ದಾರೆ.

error: Content is protected !!