ಹೆಚ್‌ಡಿಕೆಗೆ ವರ್ಣದ ವಿಚಾರದಲ್ಲಿ ಅವಹೇಳನ ಮಾಡಿದ ಕಾಂಗ್ರೆಸ್‌ ಶಾಸಕ ಬಿ.ಜೆಡ್‌. ಜಮೀರ್‌ ಅಹಮ್ಮದ್ ಖಾನ್‌ ವಿರುದ್ದ ಜೆಡಿಎಸ್‌ ದೂರು - BC Suddi
ಹೆಚ್‌ಡಿಕೆಗೆ ವರ್ಣದ ವಿಚಾರದಲ್ಲಿ ಅವಹೇಳನ ಮಾಡಿದ ಕಾಂಗ್ರೆಸ್‌ ಶಾಸಕ ಬಿ.ಜೆಡ್‌. ಜಮೀರ್‌ ಅಹಮ್ಮದ್ ಖಾನ್‌ ವಿರುದ್ದ ಜೆಡಿಎಸ್‌ ದೂರು

ಹೆಚ್‌ಡಿಕೆಗೆ ವರ್ಣದ ವಿಚಾರದಲ್ಲಿ ಅವಹೇಳನ ಮಾಡಿದ ಕಾಂಗ್ರೆಸ್‌ ಶಾಸಕ ಬಿ.ಜೆಡ್‌. ಜಮೀರ್‌ ಅಹಮ್ಮದ್ ಖಾನ್‌ ವಿರುದ್ದ ಜೆಡಿಎಸ್‌ ದೂರು

ಬೆಂಗಳೂರು : ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿ ಮಾರ್ಚ್‌ 30ರಂದು ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರ ಬಣ್ಣದ ಕುರಿತು ಕಾಂಗ್ರೆಸ್‌ ಶಾಸಕ ಬಿ.ಜೆಡ್‌. ಜಮೀರ್‌ ಅಹಮ್ಮದ್ ಖಾನ್‌ ‘ಕಾಲಾ ಕುಮಾರಸ್ವಾಮಿ’ ಎಂದು ಹೇಳಿದ್ದು ಇದರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಜೆಡಿಎಸ್ ಯುವ ಘಟಕ ಬೆಂಗಳೂರು ನಗರ ಪೊಲೀಸ್ ಕಮಿಷನರ್‌ಗೆ ದೂರು ನೀಡಿದೆ.

ಸೋಮವಾರ ನಗರ ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ಅವರನ್ನು ಬೆಂಗಳೂರು ಮಹಾನಗರ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ಎ.ಎಂ. ಪ್ರವೀಣ್‌ ಕುಮಾರ್‌ ನೇತೃತ್ವದ ನಿಯೋಗ ಭೇಟಿ ಮಾಡಿದ್ದು, ಕುಮಾರಸ್ವಾಮಿ ಅವರನ್ನು ಕಾಲಾ ಕುಮಾರಸ್ವಾಮಿ ಎಂದು ಹೇಳುವ ಮೂಲಕ ವರ್ಣದ ವಿಚಾರದಲ್ಲಿ ಅವಹೇಳನ ಮಾಡಿದ ಕಾಂಗ್ರೆಸ್‌ ಶಾಸಕ ಬಿ.ಜೆಡ್‌. ಜಮೀರ್‌ ಅಹಮ್ಮದ್ ಖಾನ್‌ ವಿರುದ್ದ ದೂರು ಸಲ್ಲಿಸಿತು.

ಇನ್ನು ಈ ದೂರಿನೊಂದಿಗೆ ಜೆಡಿಎಸ್‌ ನಿಯೋಗವು ಸಿ.ಡಿ.ಯೊಂದನ್ನು ನೀಡಿದ್ದು ಈ ಸಿ.ಡಿ.ಯಲ್ಲಿ ಜಮೀರ್‌ ಅಹಮ್ಮದ್ ಅವರು ಮಾ.30ರಂದು ಮಾಡಿರುವ ಭಾಷಣದ ದೃಶ್ಯಾವಳಿ ಇದೆ.

ಜಮೀರ್‌ ಅಹಮ್ಮದ್ ಅವರು ಕುಮಾರಸ್ವಾಮಿ ಅವರ ಮೈಬಣ್ಣದ ಕುರಿತು ಕೀಳಾಗಿ ಮಾತನಾಡಿದ್ದು ಕಾಲಾ ಕುಮಾರಸ್ವಾಮಿ ಎಂದು ಹೇಳಿದ್ದಾರೆ. ಇದು ಜನಾಂಗೀಯ ನಿಂದನೆಯಂತಾಗಿದ್ದು ಜಮೀರ್‌ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಜೆಡಿಎಸ್‌ ನಿಯೋಗ ಆಗ್ರಹಿಸಿದೆ.

ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡ ಕಾಂಗ್ರೆಸ್ ನಾಯಕ ಲಖನ್ ಜಾರಕಿಹೊಳಿ.!

error: Content is protected !!