ಅಂತ್ಯಕ್ರಿಯೆಗೆ ಜಾಗ ಹುಡ್ಕಿದ್ರು, ಆಕ್ಸಿಜನ್ ಬಗ್ಗೆ ಯಾರು ಮಾನಿಟರ್ ಮಾಡ್ತಿಲ್ಲ: ಡಿಕೆಶಿ ಗರಂ - BC Suddi
ಅಂತ್ಯಕ್ರಿಯೆಗೆ ಜಾಗ ಹುಡ್ಕಿದ್ರು, ಆಕ್ಸಿಜನ್ ಬಗ್ಗೆ ಯಾರು ಮಾನಿಟರ್ ಮಾಡ್ತಿಲ್ಲ: ಡಿಕೆಶಿ ಗರಂ

ಅಂತ್ಯಕ್ರಿಯೆಗೆ ಜಾಗ ಹುಡ್ಕಿದ್ರು, ಆಕ್ಸಿಜನ್ ಬಗ್ಗೆ ಯಾರು ಮಾನಿಟರ್ ಮಾಡ್ತಿಲ್ಲ: ಡಿಕೆಶಿ ಗರಂ

ಬೆಂಗಳೂರು: ಅಂತ್ಯ ಸಂಸ್ಕಾರಕ್ಕೆ ಎಲ್ಲಾದರೂ ಜಾಗ ಹುಡ್ಕಿ ಅಂದಾಗ ಜಾಗ ಹುಡ್ಕಿದರು. ಆಕ್ಸಿಜನ್ ವಿಚಾರದಲ್ಲಿ ಯಾರು ಮಾನಿಟರ್ ಮಾಡ್ತಿಲ್ಲ.  ನಾನೇ ಚೀಫ್ ಸೆಕ್ರೆಟರಿ ಜೊತೆ ಮಾತನಾಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ರಾಜ್ಯ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ. ಆಕ್ಸಿಜನ್‍ನನ್ನು ಒದಗಿಸಿಕೊಡೊದಕ್ಕೆ ಆಗಲ್ಲ ಎಂದರೆ ಹೆಲ್ತ್ ಸೆಕ್ರೆಟರಿ, ಚೀಫ್ ಸೆಕ್ರೆಟರಿಯ ಗಮನಕ್ಕೆ ತರುತ್ತೇನೆ.

ಆಕ್ಸಿಜನ್ ಸಿಗದೇ 24 ಜನರ ಸಾವಿನ ವಿಚಾರ ಮಾಧ್ಯಮಗಳಲ್ಲಿ ಬರೋದು ಸುಳ್ಳಾ ಹಾಗಿದ್ರೆ? ವಾಸ್ತವ ಹೇಳಲಿ. ಸರ್ಕಾರದ ಮಂತ್ರಿಗಳ ಬಗ್ಗೆ ನಂಬಿಕೆ ಹೋಗಿದೆ. ಅದ್ಕೆ ನಾನು ಚೀಫ್ ಸೆಕ್ರೆಟರಿ ಮೊರೆ ಹೋಗ್ತೇನೆ ಎಂದು ಕಿಡಿಕಾರಿದ್ದಾರೆ. ಈ ಬಗ್ಗೆ ಚೀಫ್ ಸೆಕ್ರೆಟರಿಯನ್ನು ಭೇಟಿ ಮಾಡ್ತೇನೆ. ಆಕ್ಸಿಜನ್ ಸಮಸ್ಯೆ ಬಗ್ಗೆ, ನಿತ್ಯ ಸುಮಾರು ಕರೆಗಳು ಬರ್ತಿವೆ ನನಗೆ ಸರ್ಕಾರದ ಮಂತ್ರಿಗಳು, ತಜ್ಞರು ನಂಬಿಕೆ ಕಳೆದುಕೊಂಡಿದ್ದಾರೆ ಎಂದಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್‌ ಪಾಳಯದಲ್ಲೂ ಕೊರೋನಾ ವೈರಸ್ ಭೀತಿ