ಇವರದ್ದೆಲ್ಲಾ ಅಡ್ಜಸ್ಟ್ಮೆಂಟ್ ರಾಜಕಾರಣ ಅಂತ ವಿಶ್ವನಾಥ್ ರ ಅರ್ಥವೇನು.? - BC Suddi
ಇವರದ್ದೆಲ್ಲಾ ಅಡ್ಜಸ್ಟ್ಮೆಂಟ್ ರಾಜಕಾರಣ ಅಂತ ವಿಶ್ವನಾಥ್ ರ ಅರ್ಥವೇನು.?

ಇವರದ್ದೆಲ್ಲಾ ಅಡ್ಜಸ್ಟ್ಮೆಂಟ್ ರಾಜಕಾರಣ ಅಂತ ವಿಶ್ವನಾಥ್ ರ ಅರ್ಥವೇನು.?

 

ಮೈಸೂರು: ಇವರದ್ದೆಲ್ಲಾ ಅಡ್ಜಸ್ಟ್ಮೆಂಟ್ ರಾಜಕಾರಣ. ಭ್ರಷ್ಟಾಚಾರದಲ್ಲೂ ಅಷ್ಟೇ ಈಗಿನ ಸಿಡಿಯಲ್ಲೂ ಅಷ್ಟೇ. ಸಿದ್ದರಾಮಯ್ಯ ಅವರ ಅರ್ಕಾವತಿ ಪ್ರಕರಣ ಮುಚ್ಚಿ ಹಾಕುವುದಕ್ಕೆ, ಕುಮಾರಸ್ವಾಮಿ ಪೋನ್ ಕದ್ದಾಲಿಕೆ ಮುಚ್ಚಿಕೊಳ್ಳಲು ಅಡ್ಜಸ್ಟ್ಮೆಂಟ್ ನಡೆದಿದೆ. ನಾವು ಯಾವ ಪುರುಷಾರ್ಥಕ್ಕೆ ದಂಗೆ ಎದ್ದು ಸರ್ಕಾರ ಬೀಳಿಸಿದೆವೋ ಅಂತ ಈಗ ಅನ್ನಿಸುತ್ತಿದೆ ಎನ್ನುವ ಮೂಲಕ  ಹಳ್ಳಿಹಕ್ಕಿ ಹೆಚ್.ವಿಶ್ವನಾಥ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.!

ರಾಜ್ಯದಲ್ಲಿರೋದು ಬಿಜೆಪಿ ಸರ್ಕಾರ ಅಲ್ಲ. ಅದು ನ್ಯಾಷನಲ್ ಸರ್ಕಾರ. ಸಿದ್ದರಾಮಯ್ಯರನ್ನ ಕುಮಾರಸ್ವಾಮಿ ರಕ್ಷಣೆ ಮಾಡ್ತಾರೆ, ಕುಮಾರಸ್ವಾಮಿರವನ್ನ ಸಿದ್ದರಾಮಯ್ಯ ರಕ್ಷಣೆ ಮಾಡ್ತಾರೆ, ಇಬ್ಬರೂ ಸೇರಿ ಯಡಿಯೂರಪ್ಪರನ್ನ ರಕ್ಷಿಸುತ್ತಿದ್ದಾರೆ. ಇದು ಒಬ್ಬೊರಿಗೊಬ್ಬರು ಅಡ್ಜಸ್ಟ್ಮೆಂಟ್ ರಾಜಕಾರಣ. ಇದರಲ್ಲಿ ಯಡಿಯೂರಪ್ಪ ನ್ಯಾಷನಲ್ ಗೌರ್ನ್ಮೆಂಟ್ ಚೀಫ್ ಮಿನಿಸ್ಟರ್. ಅವರು ಬುದ್ದಿ ಚಾತುರ್ಯದಿಂದ ಎಲ್ಲರನ್ನು ಅಡ್ಜಸ್ಟ್ ಮಾಡಿಕೊಂಡಿದ್ದಾರೆ. !

error: Content is protected !!