ಗುಜರಾತ್ ನ ಪ್ರಮುಖ ನಗರಗಳಲ್ಲಿ ರಾತ್ರಿ ಕರ್ಫ್ಯೂ ಜಾರಿ..! - BC Suddi
ಗುಜರಾತ್ ನ ಪ್ರಮುಖ ನಗರಗಳಲ್ಲಿ ರಾತ್ರಿ ಕರ್ಫ್ಯೂ ಜಾರಿ..!

ಗುಜರಾತ್ ನ ಪ್ರಮುಖ ನಗರಗಳಲ್ಲಿ ರಾತ್ರಿ ಕರ್ಫ್ಯೂ ಜಾರಿ..!

ಅಹಮದಾಬಾದ್: ಕೋವಿಡ್ 19ಸೋಂಕು ಪ್ರಕರಣ ದಿಢೀರ್ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ನಾಲ್ಕು ಪ್ರಮುಖ ನಗರಗಳಲ್ಲಿ ಮಾರ್ಚ್ 17ರಿಂದ ರಾತ್ರಿ ಕರ್ಫ್ಯೂ ಜಾರಿಗೊಳಿಸಲು ಗುಜರಾತ್ ಸರ್ಕಾರ ಮಾ . 16ನಿರ್ಧರಿಸಿದೆ. ಗುಜರಾತ್ ನ ಪ್ರಮುಖ ನಗರಗಳಾದ ಅಹಮದಾಬಾದ್, ಸೂರತ್, ವಡೋದರಾ ಮತ್ತು ರಾಜ್ ಕೋಟ್ ನಲ್ಲಿ ಮಾ. 17ರಿಂದ 31ರವರೆಗೆ ರಾತ್ರಿ 10 ಗಂಟೆಯಿ0ದ ಬೆಳಗ್ಗೆ 6ಗಂಟೆವರೆಗೆ ಮತ್ತೆ ರಾತ್ರಿ ಕರ್ಫ್ಯೂ ಜಾರಿಗೊಳಿಸುವುದಾಗಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಮೊದಲು ರಾತ್ರಿ 12 ರಿಂದ ಬೆಳಗ್ಗೆ 6ಗಂಟೆವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಿತ್ತು. ಮುಖ್ಯಮಂತ್ರಿ ವಿಜಯ್ ರೂಪಾನಿ ನೇತೃತ್ವದ ಕೋವಿಡ್ ಟಾಸ್ಕ್ ಪೋರ್ಸ್ ನ ಕೋರ್ ಕಮಿಟಿ ರಾತ್ರಿ ಕರ್ಫ್ಯೂ ಜಾರಿಗೊಳಿಸುವ ನಿರ್ಧಾರ ತೆಗೆದುಕೊಂಡಿರುವುದಾಗಿ ವರದಿ ತಿಳಿಸಿದೆ.
ಈ ನಿರ್ಬಂಧ ಮಾರ್ಚ್ 31ರವರೆಗೆ ಮುಂದುರಿಯಲಿದೆ. ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ನಿಟ್ಟಿನಲ್ಲಿ ಜನರು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿ ರೂಪಾನಿ ತಿಳಿಸಿದ್ದಾರೆ.

 

error: Content is protected !!