ಗುಜರಾತ್‌ನಲ್ಲಿ ನವಜಾತ ಅವಳಿ ಶಿಶುಗಳಿಗೆ ಕೊರೊನಾ ಪಾಸಿಟಿವ್ : ಆಸ್ಪತ್ರೆಗೆ ದಾಖಲು - BC Suddi
ಗುಜರಾತ್‌ನಲ್ಲಿ ನವಜಾತ ಅವಳಿ ಶಿಶುಗಳಿಗೆ ಕೊರೊನಾ ಪಾಸಿಟಿವ್ : ಆಸ್ಪತ್ರೆಗೆ ದಾಖಲು

ಗುಜರಾತ್‌ನಲ್ಲಿ ನವಜಾತ ಅವಳಿ ಶಿಶುಗಳಿಗೆ ಕೊರೊನಾ ಪಾಸಿಟಿವ್ : ಆಸ್ಪತ್ರೆಗೆ ದಾಖಲು

ಗುಜರಾತ್: ನವಜಾತ ಅವಳಿ ಶಿಶುಗಳಿಗೆ ಕೊರೊನಾ ಸೋಂಕು ದೃಢಪಟ್ಟು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಗುಜರಾತ್‌ನ ವಡೋದರಾದಲ್ಲಿ ನಡೆದಿದೆ. ‌ಅವಳಿ ಮಕ್ಕಳು ತೀವ್ರವಾದ ಅತಿಸಾರ ಮತ್ತು ಡೀಹೈಡ್ರೇಶನ್‌ನಿಂದ ಬಳಲುತ್ತಿದ್ದು, ಜನಿಸಿದ 15 ದಿನಗಳ ಬಳಿಕ ಆಸ್ಪತ್ರೆಗೆ ಕರೆತರಲಾಯಿತು.

ಬಳಿಕ ನಡೆಸಿದ ಪರೀಕ್ಷೆಯಲ್ಲಿ ಎರಡೂ ಮಕ್ಕಳಿಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸದ್ಯ, ಶಿಶುಗಳ ಆರೋಗ್ಯ ಸ್ಥಿತಿ ಉತ್ತಮವಾಗಿದ್ದು, ಇನ್ನೂ ಡಿಸ್ಚಾರ್ಜ್ ಆಗಿಲ್ಲ ಎಂದು ಎಸ್‌ಎಸ್‌ಜಿ ಆಸ್ಪತ್ರೆಯ ಪೀಡಿಯಾಟ್ರಿಕ್ಸ್ ವಿಭಾಗದ ಮುಖ್ಯಸ್ಥ ಡಾ. ಐಯ್ಯರ್ ತಿಳಿಸಿದ್ದಾರೆ.

ಇನ್ನು ಗುಜರಾತ್‌ನಲ್ಲಿ ಈವರೆಗೂ ಒಟ್ಟು 3,07,698 ಜನರಿಗೆ ಸೋಂಕು ತಗುಲಿದ್ದು, 12,610 ಸಕ್ರಿಯ ಪ್ರಕರಣಗಳು ಇದ್ದು, 4,519 ಜನರು ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಆಲಿಯಾ ಭಟ್‌ಗೆ ಕೊರೊನಾ ಪಾಸಿಟಿವ್

error: Content is protected !!