ಬೆಂಗಳೂರು: ಆಕ್ಸಿಜನ್ ಬಳಕೆಗೆ ಮಾರ್ಗಸೂಚಿ ಹೊರಡಿಸಿದ ಸರ್ಕಾರ - BC Suddi
ಬೆಂಗಳೂರು: ಆಕ್ಸಿಜನ್ ಬಳಕೆಗೆ ಮಾರ್ಗಸೂಚಿ ಹೊರಡಿಸಿದ ಸರ್ಕಾರ

ಬೆಂಗಳೂರು: ಆಕ್ಸಿಜನ್ ಬಳಕೆಗೆ ಮಾರ್ಗಸೂಚಿ ಹೊರಡಿಸಿದ ಸರ್ಕಾರ

ಬೆಂಗಳೂರು: ರಾಜ್ಯದ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ವ್ಯರ್ಥ ಬಳಕೆಗೆ ಕಡಿವಾಣ ಹಾಕಲು ಮತ್ತು ಪರಿಣಾಮಕಾರಿಯಾಗಿ ಬಳಕೆಗೆ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ಬಿಬಿಎಂಪಿ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿಗಳು ಆಕ್ಸಿಜನ್‌ ಬಳಕೆ, ಅನುಷ್ಠಾನದ ಮೇಲ್ವಿಚಾರಣೆ ನಡೆಸುವಂತೆ ಸೂಚಿಸಿದೆ. ಸ್ಯಾಚುರೇಟ್‌ ಪಾಯಿಂಟ್‌ 94ಕ್ಕಿಂತ ಮೇಲ್ಪಟ್ಟವರಿಗೆ ಆಕ್ಸಿಜನ್‌ ಅನಗತ್ಯ ಎಂದು ತಿಳಿಸಿದೆ.

ಕೋವಿಡ್‌ ಕೇರ್‌ ಸೆಂಟರ್‌, ಜಿಲ್ಲಾಸ್ಪತ್ರೆ ಮತ್ತು ಆರೋಗ್ಯ ಕೇಂದ್ರಗಳಿಗೆ ನೋಡಲ್‌ ಅಧಿಕಾರಿಗಳನ್ನು ಜಿಲ್ಲಾಧಿಕಾರಿಗಳು ನೇಮಿಸುತ್ತಾರೆ. ಆಕ್ಸಿಜನ್‌ ಬಳಕೆಯ ಕುರಿತು ಬೆಳಗ್ಗೆ 8 ಮತ್ತು ಸಂಜೆ 6 ಗಂಟೆಗೆ ನೋಡಲ್‌ ಅಧಿಕಾರಿಗಳು ಪರಿಶೀಲಿಸುವರು. ಆಕ್ಸಿಜನ್‌ ಅವಲಂಬಿತ ಸೋಂಕಿತರ ಮತ್ತು ಆಗತ್ಯವಿರುವವರ ಪ್ರಮಾಣವನ್ನು ನೋಡಲ್‌ ಅಧಿಕಾರಿಗಳಿಂದ ಜಿಲ್ಲಾಧಿಕಾರಿಗಳು ಮಾಹಿತಿ ಪಡೆದು ಆರೋಗ್ಯ ಇಲಾಖೆಯ ಆಯುಕ್ತರಿಗೆ ಮಾಹಿತಿ ನೀಡುವಂತೆ ನಿರ್ದೇಶನ ನೀಡಲಾಗಿದೆ.

ಆಕ್ಸಿಜನ್‌ ಬಳಕೆ ಮಾರ್ಗಸೂಚಿ

ಆಸ್ಪತ್ರೆಗಳಲ್ಲಿ ಅನಾವಶ್ಯಕ ದಾಖಲು ಬೇಡ

3 ದಿನಗಳವರೆಗೆ ಆಕ್ಸಿಜನ್‌ ಸಾಕಾಗುವಷ್ಟು ಸಂಗ್ರಹ

ಪ್ರತಿ ಬೆಡ್‌ಗೆ 4 ಜಂಬೂ ಸಿಲಿಂಡರ್‌ ವ್ಯವಸ್ಥೆ

ಕೇರ್‌ ಸೆಂಟರ್‌ಗಳು ಆಕ್ಸಿಜನ್‌ ಉತ್ಪಾದನೆ ಸೂಚನೆ

ಹೈ ಫ್ಲೋ ಸಿಸ್ಟಮ್‌ ಅನಗತ್ಯ ಬಳಸದಂತೆ ಆಸ್ಪತ್ರೆಗಳಿಗೆ ನಿರ್ದೇಶನ

ಆಕ್ಸಿಜನ್‌ ಬಳಕೆಯ ಬಗ್ಗೆ ದತ್ತಾಂಶ ಸಂಗ್ರಹ

ಬೆಡ್‌ ಸಂಖ್ಯೆ, ಹೆಸರು, ವಯಸ್ಸು ಸೇರಿದಂತೆ ಸೋಂಕಿತ ಮಾಹಿತಿ ಸಂಗ್ರಹ

ಆಕ್ಸಿಜನ್‌ ಬಳಕೆ, ಪೂರೈಕೆ ಮತ್ತು ಸೋಂಕಿತರ ಸ್ಥಿತಿಯ ದತ್ತಾಂಶ ಸಂಗ್ರಹ