ವಿಶ್ವದಲ್ಲೇ ಮೊದಲ ಯೋಜನೆ - 24 ಗಂಟೆಗಳ ಕಾಲ ನಿಗಾ - ಕಳ್ಳರು, ದರೋಡೆಕೋರರಿಗೆ 'ಜಿಪಿಎಸ್ ಟ್ಯಾಗ್' - BC Suddi
ವಿಶ್ವದಲ್ಲೇ ಮೊದಲ ಯೋಜನೆ – 24 ಗಂಟೆಗಳ ಕಾಲ ನಿಗಾ – ಕಳ್ಳರು, ದರೋಡೆಕೋರರಿಗೆ ‘ಜಿಪಿಎಸ್ ಟ್ಯಾಗ್’

ವಿಶ್ವದಲ್ಲೇ ಮೊದಲ ಯೋಜನೆ – 24 ಗಂಟೆಗಳ ಕಾಲ ನಿಗಾ – ಕಳ್ಳರು, ದರೋಡೆಕೋರರಿಗೆ ‘ಜಿಪಿಎಸ್ ಟ್ಯಾಗ್’

ಲಂಡನ್: ಪುನಾವರ್ತಿತವಾಗಿ ಕಳ್ಳತನ ಎಸಗುವ ಅಪರಾಧಿ ಹಾಗೂ ಅಪರಾಧಗಳನ್ನು ನಿಯಂತ್ರಿಸಲು ಲಂಡನ್ ಸರ್ಕಾರ ಹೊಸ ಯೋಜನೆಯೊಂದನ್ನು ಸಿದ್ದಪಡಿಸಿಕೊಂಡಿದ್ದು, ಇದು ವಿಶ್ವದಲ್ಲೇ ಮೊದಲ ಯೋಜನೆ ಎಂದು ಹೇಳಿಕೊಂಡಿದೆ.

ಹೌದು, ಜೈಲಿನಿಂದ ಶಿಕ್ಷೆ ಅನುಭವಿಸಿ ಬಿಡುಗಡೆಯಾದ ದರೋಡೆಕೋರರು, ಕಳ್ಳರು ಮತ್ತೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆ ಇರುವುದರಿಂದ ಇವರ ಚಲನವಲಗಳ ಮೇಲೆ ನಿಗಾ ಇರಿಸಲು ಜಿಪಿಎಸ್ ಟ್ಯಾಗ್‌ ಅಳವಡಿಸಲು ಲಂಡನ್ ಸರ್ಕಾರ ತೀರ್ಮಾನಿಸಿದ್ದು, ವಿಶ್ವದಲ್ಲೆ ಮೊದಲ ವಿನೂತನ ಯೋಜನೆಗೆ ಸರ್ಕಾರ ಕೈ ಹಾಕಿದೆ.

“ಜೈಲಿನಿಂದ ಬಿಡುಗಡೆಯಾದ ಕಳ್ಳರು, ದರೋಡೆಕೋರರ ಚಲನವಲನಗಳನ್ನು ಪತ್ತೆಹಚ್ಚಲು ಹಾಗೂ ಸ್ಥಳೀಯವಾದ ಅಪರಾಧಗಳನ್ನು ಭೇದಿಸುವ ಉದ್ದೇಶದಿಂದ ವಿಶ್ವದ ಮೊದಲ ಯೋಜನೆಯಲ್ಲಿ ಇದಾಗಿದೆ. ಕಳ್ಳತನ ಮತ್ತು ಕಳ್ಳತನದ ಆರೋಪಿಗಳಲ್ಲಿ ಜೈಲಿನಲ್ಲಿ ಶಿಕ್ಷೆ ಅನುಭವಿಸಿ ಹೊರಬಂದ ಕೆಲವರು ಮತ್ತೆ ಅದೇ ದಂಧೆಗಿಳಿಯುತ್ತಾರೆ. ಅಪರಾಧಿಗಳನ್ನು ಹಿಡಿಯಲು ಇಂತಹ ಜಿಪಿಎಸ್ ಟ್ಯಾಗ್‌ಗಳು ಪೊಲೀಸರಿಗೆ ಸಹಾಯ ಮಾಡುತ್ತದೆ, ಜೈಲಿನಿಂದ ಬಿಡುಗಡೆಯಾದ ಬಳಿಕ ಒಂದು ವರ್ಷದವರೆಗೆ ಈ ಅಪರಾಧಿಗಳಿಗೆ ಟ್ಯಾಗ್ ಅಳವಡಿಸಿ ದಿನದ 24 ಗಂಟೆಗಳ ಕಾಲ ನಿಗಾ ವಹಿಸಲಾಗುವುದು” ಎಂದು ಅಪರಾಧ ಮತ್ತು ಪೊಲೀಸ್ ಸಚಿವ ಕಿಟ್ ಮಾಲ್ತ್‌ಹೌಸ್ ತಿಳಿದ್ದಾರೆ.

ಅಲ್ಲಿನ ಹೊಸ ನಿಯಮಗಳ ಪ್ರಕಾರ, ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಯನ್ನು ಅನುಭವಿಸಿದ ದರೋಡೆಕೋರರು ಮತ್ತು ಕಳ್ಳರನ್ನು ಜಿಪಿಸಿ ಟ್ಯಾಗ್‌ ಅಳವಡಿಸಿ ಬಿಡುಗಡೆ ಮಾಡಲಾಗುವುದು, ಇವರನ್ನು 24 ಗಂಟೆಗಳ ಕಾಲ, 12 ತಿಂಗಳವರೆಗೆ ಮೇಲ್ವಿಚಾರಣೆ ಮಾಡಲಾಗುತ್ತದೆ. ಟ್ಯಾಗ್‌ಗಳಲ್ಲಿರುವವರು ಇತ್ತೀಚೆಗೆ ನಡೆದ ಕಳ್ಳತನ ಮತ್ತು ದರೋಡೆ ನಡೆದ ಸಮೀಪ ಪ್ರದೇಶದಲ್ಲಿದ್ದಾರೆಯೇ ಎಂದು ಪೊಲೀಸರು, ಜೈಲಾಧಿಕಾರಿಗಳು, ಪರೀಕ್ಷಾ ಸೇವಾ ಸಿಬ್ಬಂದಿ ತನಿಖೆ ಮಾಡಬಹುದಾಗಿದೆ.

ಈ ಯೋಜನೆ ಏಪ್ರಿಲ್ 12 ರಂದು ಆರು ಪೊಲೀಸ್ ಪಡೆಗಳಲ್ಲಿ ಪ್ರಾರಂಭವಾಗಲಿದ್ದು, ಮೊದಲ ಆರು ತಿಂಗಳಲ್ಲಿ 250 ಅಪರಾಧಿಗಳನ್ನು ಟ್ಯಾಗ್ ಮಾಡಲಾಗುತ್ತದೆ. ಸೆಪ್ಟೆಂಬರ್‌ನಲ್ಲಿ ಇನ್ನೂ 13 ಪ್ರದೇಶಗಳಿಗೆ ವಿಸ್ತರಿಸಲಾಗುವುದು.

“ಅಪರಾಧಗಳಿಗೆ ತಂತ್ರಜ್ಞಾನವು ಫೂಲ್ ಪ್ರೂಫ್ ಅಲ್ಲ, ಕಳ್ಳರು ತಂತ್ರಜ್ಞಾನದ ಸುತ್ತಲೂ ಕೆಲಸ ಮಾಡುವಲ್ಲಿ ಬಹಳ ಪ್ರವೀಣರು. ಆದರೆ ಜಿಪಿಎಸ್ ಟ್ಯಾಗ್ ಗೋಚರಿಸುವುದು ಅವರಿಗೆ ಗೌರವದ ಬ್ಯಾಡ್ಜ್ ಆಗಿರಬಹುದು, ಅಥವಾ ಇದು ಕಳಂಕವಾಗಿರಬಹುದು. ಯಾರಾದರೂ ಅಪರಾಧಿ ಎಂದು ನಿಜವಾಗಿ ಎತ್ತಿ ತೋರಿಸುವುದರಿಂದ ಜನರು ಟ್ಯಾಗ್‌ನೊಂದಿಗೆ ಬೀದಿಗಳಲ್ಲಿ ಓಡಾಡಲು ನಾಚಿಕೆಪಡಬಹುದು” ಎಂದು ಅಲ್ಲಿನ ಕ್ರಿಮಿನಲ್ ಡಿಫೆನ್ಸ್ ಸಾಲಿಸಿಟರ್ ನಿಕ್ ಫ್ರೀಮನ್ ಹೇಳಿದ್ದಾರೆ.

ಆದರೆ ಅಪರಾಧಗಳನ್ನು ನಿಯಂತ್ರಿಸುವ ಈ ವ್ಯವಸ್ಥೆಯಿಂದ ಪ್ರತಿವರ್ಷ ತೆರಿಗೆದಾರರ ಮೇಲಾಗುವ 8 4.8 ಬಿಲಿಯನ್ ಡಾಲರ್ ಭಾರವನ್ನು ಕಡಿಮೆ ಮಾಡುತ್ತದೆ ಎಂದು ಇಲ್ಲಿನ ಸರ್ಕಾರ ಹೇಳಿದೆ.

error: Content is protected !!