ಸರ್ಕಾರಿ ಕಟ್ಟಡ ಮತ್ತು ಸಂಸ್ಥೆಗಳಲ್ಲಿ ರಾಷ್ಟ್ರಧ್ವಜ ಹಾರಿಸುವ ಕುರಿತ ಸೂಚನೆಯನ್ನೂ ನೀಡಿದ  ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ - BC Suddi
ಸರ್ಕಾರಿ ಕಟ್ಟಡ ಮತ್ತು ಸಂಸ್ಥೆಗಳಲ್ಲಿ ರಾಷ್ಟ್ರಧ್ವಜ ಹಾರಿಸುವ ಕುರಿತ ಸೂಚನೆಯನ್ನೂ ನೀಡಿದ  ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ

ಸರ್ಕಾರಿ ಕಟ್ಟಡ ಮತ್ತು ಸಂಸ್ಥೆಗಳಲ್ಲಿ ರಾಷ್ಟ್ರಧ್ವಜ ಹಾರಿಸುವ ಕುರಿತ ಸೂಚನೆಯನ್ನೂ ನೀಡಿದ  ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ

ಶ್ರೀನಗರ: ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಜಮ್ಮು-ಕಾಶ್ಮೀರದ ಸರ್ಕಾರಿ ಕಟ್ಟಡ ಮತ್ತು ಸಂಸ್ಥೆಗಳಲ್ಲಿ 15 ದಿನಗಳ ಒಳಗಾಗಿ ರಾಷ್ಟ್ರಧ್ವಜ ಹಾರಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳು, ವಿಭಾಗೀಯ ಆಯುಕ್ತರು ಹಾಗೂ ಪೊಲೀಸ್ ಸುಪರಿಂಟೆಂಡೆಂಟ್‌ಗಳ ಜತೆ ಸಭೆ ನಡೆಸಿ ಮಾತನಾಡಿದ ಅವರು, “ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆಯ ‘ಆಜಾದಿ ಕಾ ಅಮೃತ್‌ ಮಹೋತ್ಸವ್’ ಕಾರ್ಯಕ್ರಮದ ಅಡಿ ನಡೆಯುತ್ತಿರುವ ಚಟುವಟಿಕೆಗಳ ಪರಾಮರ್ಶೆ ನಡೆಸಿದ್ದು.

ಸರ್ಕಾರಿ ಕಟ್ಟಡ ಮತ್ತು ಸಂಸ್ಥೆಗಳಲ್ಲಿ ರಾಷ್ಟ್ರಧ್ವಜ ಹಾರಿಸುವ ಕುರಿತ ಸೂಚನೆಯನ್ನೂ ನೀಡಿದ್ದಾರೆ” ಎನ್ನಲಾಗಿದೆ. ಇನ್ನು ರಾಜ್ಯಪಾಲರ ಸೂಚನೆಯನ್ನು ಪಾಲಿಸುವಂತೆ ವಿಭಾಗೀಯ ಆಯುಕ್ತರ ಕಚೇರಿಯು ಕೇಂದ್ರಾಡಳಿತ ಪ್ರದೇಶದ ಎಲ್ಲ ಉಪ ಆಯುಕ್ತರು ಮತ್ತು ವಿಭಾಗ ಮುಖ್ಯಸ್ಥರಿಗೆ ಆದೇಶಿಸಿದೆ ಎಮ್ದು ವರದಿಯಾಗಿದೆ.

‘ಆಜಾದಿ ಕಾ ಅಮೃತ್‌ ಮಹೋತ್ಸವ್’ಗೆ ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಇದರ ಅಂಗವಾಗಿ 2022ರ ಆಗಸ್ಟ್ 15ರ ವರೆಗೆ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ.

error: Content is protected !!