'ಗುಡ್‌ಬೈ' ಮೂಲಕ ಬಾಲಿವುಡ್‌ನ ಬಿಗ್‌ಬಿ ಅಮಿತಾಬ್ ಬಚ್ಚನ್ ಜೊತೆ ರಶ್ಮಿಕಾ ಮಂದಣ್ಣ - BC Suddi
 ‘ಗುಡ್‌ಬೈ’ ಮೂಲಕ ಬಾಲಿವುಡ್‌ನ ಬಿಗ್‌ಬಿ ಅಮಿತಾಬ್ ಬಚ್ಚನ್ ಜೊತೆ ರಶ್ಮಿಕಾ ಮಂದಣ್ಣ

 ‘ಗುಡ್‌ಬೈ’ ಮೂಲಕ ಬಾಲಿವುಡ್‌ನ ಬಿಗ್‌ಬಿ ಅಮಿತಾಬ್ ಬಚ್ಚನ್ ಜೊತೆ ರಶ್ಮಿಕಾ ಮಂದಣ್ಣ

ಬೆಂಗಳೂರು: ಬಾಲಿವುಡ್‌ನ ಬಿಗ್‌ಬಿ ಅಮಿತಾಬ್ ಬಚ್ಚನ್ ಜೊತೆ ರಶ್ಮಿಕಾ ಮಂದಣ್ಣ ‘ಗುಡ್‌ಬೈ’ ಸಿನಿಮಾದಲ್ಲಿ ಅಭಿನಯಿಸುತ್ತಿದು, ಚಿತ್ರ ಮುಹೂರ್ತ ಸಮಾರಂಭ ನಡೆದು ಶೂಟಿಂಗ್ ಆರಂಭಗೊಂಡಿದೆ.

ಈ ಕುರಿತು ಟ್ವೀಟ್ ಮಾಡಿರುವ ರಶ್ಮಿಕಾ ಮಂದಣ್ಣ, ” ಪರ್ಫಾಮ್ ಮಾಡುವುದೆಂದರೆ ನನಗೆ ತುಂಬಾ ಇಷ್ಟ. ಗುಡ್‌ಬೈ ಪ್ರಾಜೆಕ್ಟ್‌ ಕೂಡ ಅಂಥದ್ದೇ ಒಂದಾಗಿದ್ದು, ಈ ಅದ್ಭುತ ಪ್ರಯಾಣದ ಒಂದು ಭಾಗವಾಗಿರುವುದಕ್ಕೆ ರೋಮಾಂಚನಗೊಂಡಿದ್ದೇನೆ” ಎಂದು ಹೊಸ ಚಿತ್ರ ಚಿತ್ರೀಕರಣ ಶುರುವಾದ ಸಂತಸವನ್ನು ಹಂಚಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಸ್ಯಾಂಡಲ್‌ವುಡ್‌ನಲ್ಲಿ ಮಾತ್ರವಲ್ಲದೆ ಟಾಲಿವುಡ್ ಹಾಗೂ ಕಾಲಿವುಡ್‌ನಲ್ಲೂ ಬಹುಬೇಡಿಕೆಯ ನಟಿಯಾಗಿದ್ದು,ಇದೀಗ ಹಿಂದಿ ಚಿತ್ರರಂಗದಲ್ಲಿ ಎರಡನೇ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಇನ್ನೂ ಅಮಿತಾಬ್ ಬಚ್ಚನ್ ಕೂಡ ”ಹೊಸ ಜರ್ನಿ ಆರಂಭವಾಗಿರುವುದಕ್ಕೆ ಖುಷಿ ಆಗುತ್ತಿದೆ” ಎಂದು ಟ್ವೀಟ್ ಮಾಡಿದ್ದಾರೆ.

 

error: Content is protected !!