ಬೆಂಗಳೂರು: ಕೊಂಚ ರಿಲ್ಯಾಕ್ಸ್ ಆಗಿದ್ದ ಆಭರಣ ಪ್ರಿಯರಿಗೆ ಮತ್ತೆ ಶಾಕ್. ಹೌದು, ಇಂದು ಮತ್ತೆ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದ್ದು, 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 42,450 ರೂ. ಗೆ ಏರಿಕೆ ಯಾಗಿದೆ. 1 ಗ್ರಾಂ ಚಿನ್ನ ದರ ನಿನ್ನೆ 4,210 ರೂ.ಗೆ ಮಾರಾಟವಾಗಿತ್ತು.

ಇಂದಿನ ದರದಲ್ಲಿ 35 ರೂ.ಏರಿಕೆಯಾಗಿ,4,245ರೂ. ಆಗಿದೆ. 10 ಗ್ರಾಂಗೆ 42,450 ರೂ. ಆಗಿದೆ. ಹಾಗೂ 24ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 46,300ರೂ. ಆಗೆ ಮಾರಾಟವಾಗಿದೆ. ಇನ್ನು 1 ಕೆಜಿ ಬೆಳ್ಳಿ ದರ ಇಂದು 67,600 ರೂ. ಇದೆ. ಈ ವಾರ ಮೊದಲ ಎರಡು ದಿನ ಚಿನ್ನದ ದರ ಇಳಿಕೆಯಾಗಿತ್ತು. ಆದರೆ ನಿನ್ನೆಯಿಂದ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ.