ಇಳಿಕೆಯತ್ತ ಸಾಗುತ್ತಿದ್ದ ಚಿನ್ನ, ಬೆಳ್ಳಿ ದರ> ಮತ್ತಷ್ಟು ಇಳಿಕೆ - BC Suddi
ಇಳಿಕೆಯತ್ತ ಸಾಗುತ್ತಿದ್ದ ಚಿನ್ನ, ಬೆಳ್ಳಿ ದರ> ಮತ್ತಷ್ಟು ಇಳಿಕೆ

ಇಳಿಕೆಯತ್ತ ಸಾಗುತ್ತಿದ್ದ ಚಿನ್ನ, ಬೆಳ್ಳಿ ದರ> ಮತ್ತಷ್ಟು ಇಳಿಕೆ

ಬೆಂಗಳೂರು: ದೈನಂದಿನ ದರ ಬದಲಾವಣೆಯನ್ನು ಪರಿಶೀಲಿಸಿದಾಗ ಎರಡು ದಿನಗಳಿಂದ ಚಿನ್ನ ದರ ಇಳಿಕೆಯತ್ತ ಮುಖ ಮಾಡಿದೆ. ಹಾಗೆಯೇ ಎರಡು ದಿನಗಳಿಂದ ಸ್ಥಿರವಾಗಿದ್ದ ಬೆಳ್ಳಿ ದರ ಕೂಡಾ ಇಂದು ಇಳಿಕೆ ಕಂಡಿದೆ. 

22 ಕ್ಯಾರೆಟ್ 10ಗ್ರಾಂ ಚಿನ್ನ ದರ 42,050 ರೂಪಾಯಿಯಿಂದ 41,900 ರೂಪಾಯಿಗೆ ಇಳಿದಿದೆ. ದೈನಂದಿನ ದರ ಬದಲಾವಣೆಯಲ್ಲಿ 150 ರೂಪಾಯಿಯಷ್ಟು ಇಳಿಕೆ ಕಂಡಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನ ನಿನ್ನೆ 45,880 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 45,700 ರೂಪಾಯಿಗೆ ಇಳಿದಿದೆ. ದರ ಬದಲಾವಣೆಯಲ್ಲಿ 180 ರೂಪಾಯಿ ಇಳಿಕೆ ಕಂಡಿದೆ. ಹಾಗೆಯೇ ಬೆಳ್ಳಿ ದರದಲ್ಲೂ ಇಳಿಕೆ ಕಂಡಿದ್ದು ಇಂದು 1ಕೆಜಿ ಬೆಳ್ಳಿ ದರ 66,500 ರೂಪಾಯಿ ಇದೆ. 1,000 ರೂಪಾಯಿಯಷ್ಟು ಇಳಿಕೆ ಕಂಡಿದೆ.

22 ಕ್ಯಾರೆಟ್  1ಗ್ರಾಂ ಚಿನ್ನ ದರ ನಿನ್ನೆ 4,205ರೂಪಾಯಿಗೆ ಮಾರಾಟವಾಗಿದೆ. ಇಂದು 4,190 ರೂಪಾಯಿಗೆ ಕುಸಿದಿದೆ. 8 ಗ್ರಾಂ ಚಿನ್ನ 33,640 ರೂಪಾಯಿಯಿಂದ 33,520 ರೂಪಾಯಿಗೆ ಇಳಿಕೆಯಾಗಿದೆ.

24 ಕ್ಯಾರೆಟ್ 1 ಗ್ರಾಂ ಚಿನ್ನ 4,588 ರೂಪಾಯಿಯಿಂದ 4,570 ರೂಪಾಯಿಗೆ ಇಳಿಕೆ ಕಂಡಿದೆ. 8 ಗ್ರಾಂ ಚಿನ್ನ 36,704 ರೂಪಾಯಿಯಿಂದ 36,560 ರೂಪಾಯಿಗೆ ಇಳಿದಿದೆ.

ಬೆಳ್ಳಿ ದರ ಎರಡು ದಿನಗಳಿಂದ ಸ್ಥಿರತೆ ಕಾಪಾಡಿಕೊಂಡಿತ್ತು. ಹಾಗೂ ಇದೀಗ ಬೆಳ್ಳಿ ದರದಲ್ಲಿ ಬದಲಾವಣೆ ಕಂಡು ಬಂದಿದ್ದು ಕುಸಿತದತ್ತ ಸಾಗಿದೆ. 1 ಗ್ರಾಂ ಬೆಳ್ಳಿ ದರ 66 ರೂಪಾಯಿ ಇದೆ. ಹಾಗೆಯೇ 8 ಗ್ರಾಂ ಬೆಳ್ಳಿ ದರ 540 ರೂಪಾಯಿಯಿಂದ 532 ರೂಪಾಯಿಗೆ ಇಳಿಕೆಯಾಗಿದೆ. ಹಾಗೆಯೇ 10 ಗ್ರಾಂ ಬೆಳ್ಳಿ ದರ 665 ರೂಪಾಯಿಯಿಂದ 675 ರೂಪಾಯಿಗೆ ಇಳಿಕೆಯಾಗಿದೆ.

error: Content is protected !!