ದೇವರ ದಯೆ ಎಲ್ಲರ ಮೇಲಿರಲಿ: ದೇವೇಗೌಡ - BC Suddi
ದೇವರ ದಯೆ ಎಲ್ಲರ ಮೇಲಿರಲಿ: ದೇವೇಗೌಡ

ದೇವರ ದಯೆ ಎಲ್ಲರ ಮೇಲಿರಲಿ: ದೇವೇಗೌಡ

ಬೆಂಗಳೂರು : ಕೊರೊನಾ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು, ಅಭಿಮಾನಿಗಳು ಹಾಗೂ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದ್ದಾರೆ.

‘ನಾನು ಮತ್ತು ನನ್ನ ಧರ್ಮಪತ್ನಿ ಕೊರೊನಾ ರೋಗ ಲಕ್ಷಣಗಳನ್ನು ಹೊಂದಿದ್ದೇವೆಂಬ ಸುದ್ದಿ ತಿಳಿದೊಡನೆಯೇ ನೀವು ವ್ಯಕ್ತಪಡಿಸಿದ ಆತಂಕ. ವಿಚಾರಿಸಿಕೊಂಡ ಕಾಳಜಿ ತೋರಿದ ಕಳಕಳಿ, ಬೇಗ ಗುಣಮುಖರಾಗಿ ಬನ್ನಿ ಎಂದು ಹಾರೈಸಿದ ಬಗೆ ನಮ್ಮನ್ನು ಮೂಕವಿಸ್ಮಿತರನ್ನಾಗಿಸಿತು. ನಿಮ್ಮ ಅಭಿಮಾನದ ಶ್ರೀ ರಕ್ಷೆ ನನ್ನ ಪಾಲಿಗಿರುವುದು ನಮ್ಮ ಸುದೈವವೆಂದೇ ಭಾವಿಸಿದ್ದೇವೆ. ಇದಕ್ಕಾಗಿ ನಿಮಗೆಲ್ಲಾ ನನ್ನ ಧನ್ಯವಾದಗಳು’ ಎಂದು ಹೇಳಿದ್ದಾರೆ.

ಬೆಂಗಳೂರು:  ನಾಳೆ 144 ಸೆಕ್ಷನ್ ಜಾರಿ ಮಾಡಿ ಆದೇಶ ನೀಡಿದ್ದಾರೆ: ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌

error: Content is protected !!