ಗೋವಾ ಸರ್ಕಾರ ಅಲರ್ಟ್: ಮೇ 3ರವರೆಗೆ ಗೋವಾ ಸಂಪೂರ್ಣ ಸ್ತಬ್ಧ - BC Suddi
ಗೋವಾ ಸರ್ಕಾರ ಅಲರ್ಟ್:  ಮೇ 3ರವರೆಗೆ ಗೋವಾ ಸಂಪೂರ್ಣ ಸ್ತಬ್ಧ

ಗೋವಾ ಸರ್ಕಾರ ಅಲರ್ಟ್: ಮೇ 3ರವರೆಗೆ ಗೋವಾ ಸಂಪೂರ್ಣ ಸ್ತಬ್ಧ

ಪಣಜಿ: ದೇಶದಲ್ಲಿ ಕೊರೊನಾ ಎರಡನೇ ಹೆಚ್ಚಿದ್ದರಿಂದ ಗೋವಾ ಸರ್ಕಾರ ಅಲರ್ಟ್ ಆಗಿದ್ದು, ಮೇ 3ರ ಬೆಳಗ್ಗೆಯವರೆಗೆ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಗೋವಾ ಸಿಎಂ ಪ್ರಮೋದ್ ಸಾವಂತ್, “ಕೊರೊನಾ ವೈರಸ್ ಆತಂಕದ ಹಿನ್ನೆಲೆಯಲ್ಲಿ ಮೇ 3ರವರೆಗೆ ಲಾಕ್‌ಡೌನ್ ಹೇರಲಾಗಿದೆ.

ಸಾರ್ವಜನಿಕ ಸಾರಿಗೆ ಸಂಪೂರ್ಣ ಬಂದ್ ಆಗಲಿದೆ. ಕ್ಯಾಸಿನೋ, ಹೋಟೆಲ್, ಪಬ್ ಕ್ಲೋಸ್ ಆಗಲಿವೆ. ಅಗತ್ಯ ಸೇವೆ ಮತ್ತು ಸರಕು ಸಾಗಾಟಕ್ಕೆ ಮಾತ್ರ ರಾಜ್ಯದ ಗಡಿ ತೆರೆಯಲಿದೆ. ಅಗತ್ಯ ಸೇವೆ ಮತ್ತು ಕೈಗಾರಿಕೆ ಚಟುವಟಿಕೆಗಳಿಗೆ ಷರತ್ತು ಬದ್ಧ ಅನುಮತಿಯನ್ನು ಸರ್ಕಾರ ನೀಡಿದೆ” ಎಂದು ತಿಳಿಸಿದ್ದಾರೆ.

ಗೋವಾದಲ್ಲಿ ಈಗಾಗಲೇ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ನಾಲ್ಕು ದಿನಗಳ ಲಾಕ್‌ಡೌನ್ ಘೋಷಣೆ ಬೆನ್ನಲ್ಲೇ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ. ನಿಗದಿಯಾಗಿರುವ ಮದುವೆ ಸೇರಿದಂತೆ ಇನ್ನಿತರ ಸಮಾರಂಭಗಳಿಗೆ ಅವಕಾಶವಿದ್ದು, 50ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ.

ಇಸ್ರೇಲ್‌: ಧಾರ್ಮಿಕ ಸಭೆಯ ವೇಳೆ ಕಾಲ್ತುಳಿತದಿಂದಾಗಿ 44 ಮಂದಿ ಸಾವು