ನೆಹರೂ ಕುಟುಂಬಕ್ಕೆ 'ಗಾಂಧಿ' ಸರ್‌‌ನೇಮ್‌ ಅಂಟಿಕೊಂಡಿದ್ದು ಹೇಗೆ?: ಕಾಂಗ್ರೆಸ್‌ನ ಕಾಲೆಳೆದ ಬಿಜೆಪಿ - BC Suddi
ನೆಹರೂ ಕುಟುಂಬಕ್ಕೆ ‘ಗಾಂಧಿ’ ಸರ್‌‌ನೇಮ್‌ ಅಂಟಿಕೊಂಡಿದ್ದು ಹೇಗೆ?: ಕಾಂಗ್ರೆಸ್‌ನ ಕಾಲೆಳೆದ ಬಿಜೆಪಿ

ನೆಹರೂ ಕುಟುಂಬಕ್ಕೆ ‘ಗಾಂಧಿ’ ಸರ್‌‌ನೇಮ್‌ ಅಂಟಿಕೊಂಡಿದ್ದು ಹೇಗೆ?: ಕಾಂಗ್ರೆಸ್‌ನ ಕಾಲೆಳೆದ ಬಿಜೆಪಿ

ಬೆಂಗಳೂರು‌‌: ನೆಹರೂ ಕುಟುಂಬಕ್ಕೆ ʼಗಾಂಧಿʼ ಎಂಬ ಸರ್‌ನೇಮ್‌ ಅಂಟಿಕೊಂಡಿದ್ದು ಹೇಗೆ?. ನೆಹರೂವಿಗೆ ಜನಿಸಿದ ಮಗಳು ಇಂದಿರಾ ಪ್ರಿಯದರ್ಶಿನಿ ನೆಹರೂ ಆಗಬೇಕಿತ್ತು. ಇಂದಿರಾ ಗಾಂಧಿ ಆಗಿದ್ದು ಹೇಗೆ? ಎಂದು ಬಿಜೆಪಿ ಕಾಂಗ್ರೆಸ್‌ನ ಕಾಲೆಳೆದಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಬಿಜೆಪಿ, ಕೇಂದ್ರ ಸಚಿವ ಜೋಷಿ ಪ್ರಹ್ಲಾದ್‌ ಅವರ ಹೇಳಿಕೆಯಲ್ಲಿ ನೂರಕ್ಕೆ ನೂರು ಸತ್ಯಾಂಶವಿದೆ. ನೆಹರೂ ಕುಟುಂಬಕ್ಕೆ ʼಗಾಂಧಿʼ ಎಂಬ ಸರ್‌ನೇಮ್‌ ಅಂಟಿಕೊಂಡಿದ್ದು ಹೇಗೆ?. ನೆಹರೂವಿಗೆ ಜನಿಸಿದ ಮಗಳು ಇಂದಿರಾ ಪ್ರಿಯದರ್ಶಿನಿ ನೆಹರೂ ಆಗಬೇಕಿತ್ತು. ಇಂದಿರಾ ಗಾಂಧಿ ಆಗಿದ್ದು ಹೇಗೆ? ಎಂದು ಪ್ರಶ್ನಿಸಿದೆ.

“ಇಂದಿರಾ ಪ್ರಿಯದರ್ಶಿನಿ ಅವರನ್ನು ಫಿರೋಜ್‌ ಗ್ಯಾಂಡಿ ಅವರಿಗೆ ಮದುವೆ ಮಾಡಿಕೊಡಲಾಯಿತು. ಒಂದೋ ಇಂದಿರಾ ನೆಹರೂ ಆಗಬೇಕಿತ್ತು, ಅಥವಾ ಇಂದಿರಾ ಫಿರೋಜ್‌ ಆಗಬೇಕಿತ್ತು. ಇಂದಿರಾ ಗಾಂಧಿ ಆಗಿದ್ದು ಹೇಗೆ ಅಧಿನಾಯಕಿ ಸೋನಿಯಾ ಗಾಂಧಿ ಅವರ ಬಳಿ ಕೇಳಿ ಉತ್ತರಿಸುವಿರಾ?” ಎಂದು ಕೇಳಿದೆ.

“ನೆಹರೂ ಕುಟುಂಬಕ್ಕೆ ಗಾಂಧಿ ಎಂಬ ಸರ್‌ನೇಮ್ ಬಂದಿದ್ದು ಹೇಗೆ ಎಂಬುದು ಇಂದಿಗೂ ಭಾರತೀಯರನ್ನು ಕಾಡುತ್ತಿದೆ. ಗಾಂಧಿ ಎಂಬ ಹೆಸರು ನೆಹರೂ ಕುಟುಂಬಕ್ಕೆ ಸಂಬಂಧಿಸಿದ್ದಲ್ಲದಿದ್ದರೂ ಪ್ರಿಯದರ್ಶಿನಿ ಇಂದಿರಾ ಅವರಿಗೆ ಗಾಂಧಿ ಹೆಸರು ಅಂಟಿಸಿಬಿಟ್ಟರು ಹೀಗಿರುವಾಗ, ನೆಹರೂ ಸಂತತಿಯನ್ನು ನಕಲಿ ಗಾಂಧಿ ಎನ್ನುವುದರಲ್ಲಿ ಏನು ತಪ್ಪಿದೆ?” ಎಂದು ಪ್ರಶ್ನಿಸಿದೆ.

“ಫಿರೋಜ್‌ ಗ್ಯಾಂಡಿ ಮತ್ತು ಇಂದಿರಾ ಪ್ರಿಯದರ್ಶಿನಿ ಅವರ ಪುತ್ರ ರಾಜೀವ್‌ ಅವರು ರಾಜೀವ್ ಫಿರೋಜ್‌ ಆಗಬೇಕಿತ್ತು. ‌ ರಾಜೀವ್ ಗಾಂಧಿ ಆಗಿದ್ದು ಹೇಗೆ?. ರಾಬರ್ಟ್‌ ವಾದ್ರಾರನ್ನು ಮದುವೆಯಾದ ಪ್ರಿಯಾಂಕ ಅವರು ಪ್ರಿಯಾಂಕ ವಾದ್ರಾ ಆಗಬೇಕಿತ್ತು. ಪ್ರಿಯಾಂಕ ಗಾಂಧಿ ಆಗಿದ್ದೇಗೆ?. ಗಾಂಧಿ ನಾಮ ನಕಲಿಯೋ ಅಥವಾ ಕುಟುಂಬವೇ ನಕಲಿಯೋ?” ಎಂದು ಕೇಳಿದೆ.

“ತಾತ ಮುತ್ತಾತ ಯಾರಿಗೂ ಗಾಂಧಿ ಎಂಬ ಉಪನಾಮ ಇರಲಿಲ್ಲ, ಇವರಿಗೆ ಅಂಟಿಕೊಂಡಿದ್ದು ಹೇಗೆ? ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ಸಂಜಯ್‌ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ, ಮಹಾತ್ಮ ಗಾಂಧಿ ಅವರ ಹೆಸರನ್ನು ನೆಹರೂ ಸಂತತಿ ಅಕ್ರಮವಾಗಿ ಬಳಸಿಕೊಳ್ಳುತ್ತದೆ. ಇವರುಗಳು ನಕಲಿ ಅಲ್ಲದೆ ಮತ್ತೇನು?” ಎಂದು ಪ್ರಶ್ನಿಸಿದೆ.

“ಎ. ಓ. ಹ್ಯೂಮ್ ಎಂಬ ಬ್ರಿಟೀಶ್‌ ವ್ಯಕ್ತಿಯಿಂದ ಸ್ಥಾಪನೆಯಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಮಹಾತ್ಮ ಗಾಂಧೀಜಿ ಸ್ವಾತಂತ್ರ ನಂತರ ವಿಸರ್ಜಿಸುವಂತೆ ಹೇಳಿದ್ದರು. ಆದರೆ, ರಾಜಕೀಯ ದುರಾಸೆಗೆ ಬಿದ್ದ ನೆಹರೂ ಕಾಂಗ್ರೆಸ್‌ ಪಕ್ಷವನ್ನು ಮುಂದುವರೆಸಿದರು. ನಕಲಿ ಗಾಂಧಿಗಳು, ಅಸಲಿ ಗಾಂಧೀಜಿ ನಿರ್ಧಾರಕ್ಕೆ ವಿರೋಧಿಸಿದರು” ಎಂದು ಹೇಳಿದೆ.

“ವಿಶ್ವದಲ್ಲೇ ಭಾರತವನ್ನು ಶಕ್ತಿಶಾಲಿ ರಾಷ್ಟ್ರವನ್ನಾಗಿ ಪರಿವರ್ತಿಸುವ ಉದ್ದೇಶದಿಂದ ಕಾರ್ಯೋನ್ಮುಖರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಮಂಗಳಾ ಅಂಗಡಿ ಅವರನ್ನು ಲೋಕಸಭೆಗೆ ಆಯ್ಕೆ ಮಾಡಿ ಕಳುಹಿಸಬೇಕು. 130 ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ಈ ದೇಶದಲ್ಲಿ ಇದೀಗ ನೆಲೆ ಇಲ್ಲ. ಪಂಚರಾಜ್ಯಗಳ ಚುನಾವಣೆಯಲ್ಲಿ ನಮ್ಮ ಪಕ್ಷ ವಿಜಯ ಸಾಧಿಸಲಿದೆ” ಎಂದು ಪ್ರಹ್ಲಾದ್‌ ಜೋಷಿ ಹೇಳಿದ್ದರು.

ಕಾರ್ಮಿಕ ನಾಯಕರಾಗಿರುವ ಕೋಡಿಹಳ್ಳಿ ಚಂದ್ರಶೇಖರ್‌ ಅವರು, ಅರಾಜಕತೆ ಸೃಷ್ಟಿಸುವುದು ಸರಿಯಲ್ಲ: ಸಿ.ಟಿ. ರವಿ

error: Content is protected !!