ದೇಶದಲ್ಲಿ ಕೊರೊನಾ ಸೋಂಕು ಪ್ರಕರಣ: ಉಚಿತ ಆಕ್ಸಿಜನ್‌ ಕಾನ್ಸನ್ಟ್ರೇಟರ್ಸ್ ಒದಗಿಸುವ ಮೂಲಕ ನಟ ಸುನಿಲ್‌ ಶೆಟ್ಟಿ, ಅಕ್ಷಯ್ ಕುಮಾರ್‌ ಸಹಾಯಹಸ್ತ - BC Suddi
ದೇಶದಲ್ಲಿ ಕೊರೊನಾ ಸೋಂಕು ಪ್ರಕರಣ: ಉಚಿತ ಆಕ್ಸಿಜನ್‌ ಕಾನ್ಸನ್ಟ್ರೇಟರ್ಸ್ ಒದಗಿಸುವ ಮೂಲಕ  ನಟ ಸುನಿಲ್‌ ಶೆಟ್ಟಿ, ಅಕ್ಷಯ್ ಕುಮಾರ್‌  ಸಹಾಯಹಸ್ತ

ದೇಶದಲ್ಲಿ ಕೊರೊನಾ ಸೋಂಕು ಪ್ರಕರಣ: ಉಚಿತ ಆಕ್ಸಿಜನ್‌ ಕಾನ್ಸನ್ಟ್ರೇಟರ್ಸ್ ಒದಗಿಸುವ ಮೂಲಕ ನಟ ಸುನಿಲ್‌ ಶೆಟ್ಟಿ, ಅಕ್ಷಯ್ ಕುಮಾರ್‌ ಸಹಾಯಹಸ್ತ

ನವದೆಹಲಿ : ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವ ನಡುವೆಯೇ ಆಕ್ಸಿಜನ್‌ ಕೊರತೆಯೂ ಕೂಡಾ ಕಾಣಿಸಿಕೊಂಡಿದೆ. ಈ ನಿಟ್ಟಿನಲ್ಲಿ ಸಹಾಯ ಹಸ್ತ ಚಾಚಿರುವ ಬಾಲಿವುಡ್‌ ನಟ ಅಕ್ಷಯ್ ಕುಮಾರ್ ಮತ್ತು ಪತ್ನಿ ಟ್ವಿಂಕಲ್ ಖನ್ನಾ 100 ಆಕ್ಸಿಜನ್ ಕಾನ್ಸನ್ಟ್ರೇಟರ್ಸ್ ದಾನ ಮಾಡಿದ್ದಾರೆ. ಹಾಗೆಯೇ ಬಾಲಿವುಡ್‌ ನ ಸುನಿಲ್‌ ಶೆಟ್ಟಿಯೂ ಕೂಡ ಆಕ್ಸಿಜನ್‌ ಬೇಕಾದವರಿಗೆ ಸಹಾಯ ಮಾಡಲು ಮುಂದಾಗಿದ್ದು ಆಕ್ಸಿಜನ್ ಕಾನ್ಸನ್ಟ್ರೇಟರ್ಸ್ ಉಚಿತವಾಗಿ ಒದಗಿಸುವ ಸಂಘಟನೆಗಳೊಂದಿಗೆ ಕೈಜೋಡಿಸಿದ್ದಾರೆ.

100 ಆಕ್ಸಿಜನ್ ಕಾನ್ಸನ್ಟ್ರೇಟರ್ಸ್ ದಾನ ಮಾಡಿರುವ ಬಗ್ಗೆ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಟ್ವೀಟ್‌ ಮಾಡಿದ್ದು, ”ದೈವಿಕ್‌ ಫೌಂಡೇಶನ್ ಮೂಲಕ ಲಂಡನ್ ಇಲೈಟ್ ಹೆಲ್ತ್‌ನ ಡಾ.ದ್ರಾಶ್ನಿಕಾ ಪಟೇಲ್ ಹಾಗೂ ಡಾ.ಗೋವಿಂದ್ ಬಂಕಾನಿ 120 ಆಮ್ಲಜನಕ ಸಾಂದ್ರಕಗಳನ್ನು ದಾನ ಮಾಡುತ್ತಿದ್ದಾರೆ. ನಾನು ಹಾಗೂ ಅಕ್ಷಯ್‌ ಕುಮಾರ್‌ ಇದಕ್ಕೆ ಕೈಜೋಡಿಸಿ 100 ಆಕ್ಸಿಜನ್ ಕಾನ್ಸನ್ಟ್ರೇಟರ್ಸ್ ದಾನ ಮಾಡಿದ್ದೇವೆ. ಧನ್ಯವಾದಗಳು ಎಲ್ಲರೂ ನಮ್ಮಿಂದಾದ ಸಹಾಯ ಮಾಡೋಣ” ಎಂದು ಮನವಿ ಮಾಡಿದ್ದಾರೆ.

ಇನ್ನು ತಾನು ಕೂಡಾ ಆಕ್ಸಿಜನ್‌ ಪೂರೈಕೆಗೆ ಕೈಜೋಡಿಸಿರುವ ಬಗ್ಗೆ ತಿಳಿಸಿರುವ ಸುನಿಲ್‌ ಶೆಟ್ಟಿ, ”ನಾವು ಕೆಲವು ಕಷ್ಟದ ಸಮಯವನ್ನು ಎದುರಿಸುತ್ತಿದ್ದೇವೆ. ಆದರೆ ಈ ಸಂದರ್ಭದಲ್ಲಿ ಜನರು ಸಹಾಯಕ್ಕಾಗಿ ಪರಸ್ಪರರ ಕೈಜೋಡಿಸಿರುವುದು ನಮ್ಮ ಭರವಷೆಯಾಗಿದೆ. ಕೆವಿಎನ್‌ ಫೌಂಡೇಶನ್‌ನ ಫೀಡ್‌ಮೈಸಿಟಿ1 ನ ಭಾಗವಾಗಿ ಉಚಿತ ಆಮ್ಲಜನಕ ಸಾಂದ್ರಕಗಳನ್ನು ಒದಗಿಸಲು ಮುಂದಾಗಲು ನಾನು ಆಭಾರಿಯಾಗಿದ್ದೇನೆ” ಎಂದು ಹೇಳಿದ್ದಾರೆ.

 

ಅಂತಾರಾಷ್ಟ್ರೀಯ ವಿಮಾನ ಹಾರಾಟ ನಿಷೇಧವನ್ನು ಮೇ 31ರವರೆಗೆ ವಿಸ್ತರಣೆ : ನಾಗರಿಕ ವಿಮಾನಯಾನ ನಿರ್ದೇಶನಾಲಯ