ಕೊರೊನಾ ಸೋಂಕಿತರಿಗಾಗಿ ಆಂಬ್ಯುಲೆನ್ಸ್ ಚಾಲಕನಾಗಿ ಗಮನ ಸೆಳೆದ ನಟ ಅರ್ಜುನ್ ಗೌಡ - BC Suddi
ಕೊರೊನಾ ಸೋಂಕಿತರಿಗಾಗಿ ಆಂಬ್ಯುಲೆನ್ಸ್ ಚಾಲಕನಾಗಿ ಗಮನ ಸೆಳೆದ ನಟ ಅರ್ಜುನ್ ಗೌಡ

ಕೊರೊನಾ ಸೋಂಕಿತರಿಗಾಗಿ ಆಂಬ್ಯುಲೆನ್ಸ್ ಚಾಲಕನಾಗಿ ಗಮನ ಸೆಳೆದ ನಟ ಅರ್ಜುನ್ ಗೌಡ

ಬೆಂಗಳೂರು: ಕೊರೊನಾದಿಂದ ಕಷ್ಟದಲಿರುವ ಜನರಿಗೆ ಸಿನಿಮಾ ತಾರೆಯರು ತಮಗಾದ ಸಹಾಯ ಮಾಡುತ್ತಿದ್ದಾರೆ, ಅಂತೆಯೇ ಸ್ಯಾಂಡಲ್‌‌ವುಡ್ ನಟ ಅರ್ಜುನ್ ಗೌಡ ಆಂಬ್ಯುಲೆನ್ಸ್ ಚಾಲಕರಾಗಿ ಎಲ್ಲರ ಗಮನಸೆಳೆದಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಹಾಗೂ ರುಸ್ತುಂ ಚಿತ್ರದಲ್ಲಿ ನಟಿಸಿರುವ ಅರ್ಜುನ್ ಗೌಡ ಕೊರೊನಾ ಸೋಂಕಿತರಿಗಾಗಿ ಆಂಬ್ಯುಲೆನ್ಸ್ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಆಂಬ್ಯುಲೆನ್ಸ್, ಬೆಡ್ ಸಿಗದೆ ಜನ ಪರದಾಡುತ್ತಿರುವುದನ್ನು ಕಂಡ ನಟ ಸಹಾಯ ಕೋರಿದವರ ಪಾಲಿಗೆ ನೆರವಾಗಲು ಮುಂದಾಗಿದ್ದಾರೆ. ಇನ್ನು ಕೊರೊನಾ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಹಾಗೂ ಕೊರೊನಾದಿಂದ ಸಾವನ್ನಪ್ಪಿದವರ ಮೃತದೇಹಗಳನ್ನು ಸಾಗಿಸುವ ಆಂಬ್ಯುಲೆನ್ಸ್ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸದ್ಯ ಈ ಕುರಿತು ಅವರ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಅರ್ಜುನ್, “ನಾನು ಈಗಾಗಲೇ ಹಲವಾರು ಮಂದಿಯ ಅಂತ್ಯಕ್ರಿಯ ಮಾಡುವ ಮೂಲಕ ಸಹಾಯ ಮಾಡಿದ್ದು, ಅಗತ್ಯವಿರುವವರಿಗೆ ನನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದೇನೆ” ಎಂದರು.

ವೈದ್ಯಕೀಯ ಸಾಮರ್ಥ್ಯ ಮತ್ತು  ಆಕ್ಸಿಜನ್ ಲಭ್ಯತೆಯನ್ನು ಹೆಚ್ಚಿಸುವುದರ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ : ಪ್ರಧಾನಿ ಮೋದಿ