ಕೊರೊನಾ ಆಸ್ಪತ್ರೆಯಲ್ಲಿ ಅಗ್ನಿ : ಬೆಂಕಿ ಕೆನ್ನಾಲಿಗೆ 10 ಜನ ಸಾವು - BC Suddi
ಕೊರೊನಾ ಆಸ್ಪತ್ರೆಯಲ್ಲಿ ಅಗ್ನಿ : ಬೆಂಕಿ ಕೆನ್ನಾಲಿಗೆ 10 ಜನ ಸಾವು

ಕೊರೊನಾ ಆಸ್ಪತ್ರೆಯಲ್ಲಿ ಅಗ್ನಿ : ಬೆಂಕಿ ಕೆನ್ನಾಲಿಗೆ 10 ಜನ ಸಾವು

ಮುಂಬಯಿ : ಇತ್ತೀಚೆಗೆ ಆಸ್ಪತ್ರೆಗಳಲ್ಲಿ ಬೆಂಕಿ ದುರಂತಗಳು ಹೆಚ್ಚಾಗುತ್ತಿವೆ. ಮುಂಬಯಿನ ಬಂಡುಪ್ ಪ್ರದೇಶದಲ್ಲಿರುವ ಡ್ರೀಮ್ಸ್ ಮಾಲ್ ನಲ್ಲಿನ ಸನ್ ರೈಸ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಮಧ್ಯರಾತ್ರಿ ಬೆಂಕಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಒಟ್ಟು 10 ಮಂದಿ ಸಾವನಪ್ಪಿದ್ದಾರೆ.

ಮಾಲ್ ನ ನಾಲ್ಕನೇ ಮಹಡಿಯಲ್ಲಿರುವ ಆಸ್ಪತ್ರೆಯಲ್ಲಿ, ಸುಮಾರು 76 ಕೊರೊನಾ ರೋಗಿಗಳು ದಾಖಲಾಗಿದ್ದು ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಮುಂಬಯಿನ ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. 23 ಅಗ್ನಿ ಶಾಮಕ ದಳಗಳು ಸ್ಥಳದಲ್ಲಿ ಬೆಂಕಿ ನಂದಿಸುವ, ರೋಗಿಗಳನ್ನು ರಕ್ಷಿಸುವ ಕಾರ್ಯದಲ್ಲಿ ನಿರತವಾಗಿವೆ ಎಂದು ಡಿಸಿಪಿ ಪ್ರಶಾಂತ್ ಕದಮ್ ತಿಳಿಸಿದ್ದಾರೆ.
ಇನ್ನು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಂಬಯಿ ನಗರದ ಮೇಯರ್ ಕಿಶೋರಿ ಪಡ್ನೇಕರ್, ಮಾಲ್ ವೊಂದರಲ್ಲಿ ಆಸ್ಪತ್ರೆ ನಡೆಸುತ್ತಿರುವುದನ್ನು ನಾನು ನೋಡುತ್ತಿರುವುದು ಇದೇ ಮೊದಲು. ಇದು ಅತ್ಯಂತ ಗಂಭೀರ ಪ್ರಕರಣ.ಅಗ್ನಿ ಅವಘಡಕ್ಕೆ ಕಾರಣವೇನು ಎಂದು ತನಿಖೆ ನಡೆಸಲಾಗುತ್ತಿದೆ ಎಂದರು.

ಮೂಲಗಳ ಪ್ರಕಾರ ಸದ್ಯ 44 ಮಂದಿಯನ್ನು ರಕ್ಷಣೆ ಮಾಡಲಾಗಿದ್ದು ಬೇರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇಲ್ಲಿನ ಅಭ್ಯರ್ಥಿ ನೀಡಿದ ಭರವಸೆ ನೋಡಿದ್ರೆ ಎಲ್ಲರೂ ಶಾಕ್ ಆಗೋದು ಗ್ಯಾರಂಟಿ

error: Content is protected !!