ಬೆಂಗಳೂರು: ಕೆಲಸದ ವಿಷಯದಲ್ಲಿ ಪರಸ್ಪರ ಜಗಳವಾಗಿ ಸಹೋದ್ಯೋಗಿಯಿಂದಲೇ ಅಡುಗೆ ಸಹಾಯಕನೊಬ್ಬ ಕೊಲೆಯಾಗಿರುವ ಘಟನೆ ಜೆ.ಪಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಜೆ.ಪಿ.ನಗರ ರಿಂಗ್ ರಸ್ತೆಯಲ್ಲಿರುವ ಪಬ್ವೊಂದರಲ್ಲಿ ನಿನ್ನೆ ರಾತ್ರಿ ಘಟನೆ ನಡೆದಿದ್ದು , ಪಶ್ಚಿಮ ಬಂಗಾಳದ ಸಾಗರ್ (25) ಕೊಲೆಯಾಗಿರುವ ಅಡುಗೆ ಸಹಾಯಕ. ಆರೋಪಿ ತ್ರಿಪುರ ಮೂಲದ ಮೌಶಿಕ್ ಪರಾರಿಯಾಗಿದ್ದಾನೆ.
ಈ ಇಬ್ಬರು ಪಬ್ನಲ್ಲಿ ಅಡುಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ ಮೌಶಿಕ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಸಾಗರ್ ಆರೋಪ ಮಾಡಿ ಹಲ್ಲೆ ಮಾಡಿದ್ದ ಎನ್ನಲಾಗಿದೆ.ಇದರಿಂದ ಸಿಟ್ಟಾದ ಮೌಶಿಕ್ ಅಲ್ಲೇ ಇದ್ದ ಚಾಕು ತೆಗೆದುಕೊಂಡು ಸಾಗರ್ನ ಎದೆ ಹಾಗೂ ಹೊಟ್ಟೆ ಭಾಗಕ್ಕೆ ಇರಿದಿದ್ದಾನೆ.
ಗಂಭೀರವಾಗಿ ಗಾಯಗೊಂಡ ಸಾಗರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಜೆ.ಪಿ.ನಗರ ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ. ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಜೆ.ಪಿ.ನಗರ ಠಾಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.