ಬೆಂಗಳೂರು : ಮದ್ಯಪಾನಕ್ಕಾಗಿ ಹಣಕ್ಕೆ ಪೀಡಿಸುತ್ತಿದ್ದ ಮಗನನ್ನು ತಂದೆ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಬ್ಬಿಗೆರೆಯಲ್ಲಿ ಗುರುವಾರ ಸಂಜೆ ಘಟನೆ ನಡೆದಿದೆ. ಯಾದಗಿರಿ ಮೂಲದ ಹುಸೇನ್, ಪುತ್ರ ಬಾಬರ್(29)ನನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಮದ್ಯಪಾನ ಮಾಡಿ ಮನೆಗೆ ಬಂದ ಬಾಬರ್ ತನ್ನ ತಂದೆ ಹುಸೇನ್ ಬಳಿ ಹಣ ಕೇಳಿದ್ದಾನೆ ಎನ್ನಲಾಗಿದೆ. ಈ ನಡುವೆ ಮಾತಿನ ಚಕಮಕಿಯಲ್ಲಿ . ಕೋಪದಲ್ಲಿ ಕೊಡಲಿಯ ಹಿಂಭಾಗದಿಂದ ಮಗನ ಮೇಲೆ ಹುಸೇನ್ ಹಲ್ಲೆ ಮಾಡಿದ್ದಾನೆ, ಘಟನೆಯಲ್ಲಿ ಬಾಬಾರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.