ನವದೆಹಲಿ: ಕೇಂದ್ರ ಸರ್ಕಾರವು ಫಾಸ್ಟಾಗ್‌ಗೆ ಹೆಚ್ಚು ಜನಪ್ರಿಯವಾಗಲು ಹೊಸ ವೈಶಿಷ್ಟ್ಯಗಳನ್ನು ಸೇರಿಸಲು ಹೊರಟಿದೆ. ಹೌದು, ಫಾಸ್ಟಾಗ್ ಮೂಲಕ, ನೀವು ಪೆಟ್ರೋಲ್-ಡೀಸೆಲ್-ಸಿಎನ್‌ಜಿಯನ್ನು ಸಹ ಭರ್ತಿ ಮಾಡಲು ಸಾಧ್ಯವಾಗುತ್ತದೆ. ಅಲ್ಲದೆ, ಪಾರ್ಕಿಂಗ್ ಲಾಟ್‌ನಲ್ಲಿ ಯೂ ಕೂಡ ಫಾಸ್ಟ್ಯಾಗ್ ಅನ್ನು ಬಳಸಬಹುದಾಗಿದೆಯಂತೆ. ಟೋಲ್ ಪ್ಲಾಜಾದಲ್ಲಿ ಟೋಲ್ ತೆರಿಗೆಗೆ ಕಳೆದ ಫೆಬ್ರವರಿ 15 ರಿಂದ ಎಲ್ಲಾ ಟೋಲ್ ಪ್ಲಾಜಾಗಳ ಎಲ್ಲಾ ಪಥಗಳಲ್ಲಿ ಫಾಸ್ಟಾಗ್ ಕಡ್ಡಯವಾಗಿದೆ.

ಎಲ್ಲಾ ತಾಂತ್ರಿಕ ಬಿಕ್ಕಟ್ಟುಗಳನ್ನು ಪರಿಹರಿಸಿದ ನಂತರವೇ ಈ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎನ್ನಲಾಗಿದೆ. ವಿವಿಧೋದ್ದೇಶ ಸೇವೆಯಲ್ಲಿ ಫಾಸ್ಟಾಗ್‌ನ್ನು ಬಳಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದ್ದು. ಫಾಸ್ಟಾಗ್ ಅನ್ನು ಪಾರ್ಕಿಂಗ್ ಪಾವತಿಯಾಗಿ ಬಳಸಲು ಬೆಂಗಳೂರು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಪೈಲಟ್ ಯೋಜನೆಯನ್ನು ಪ್ರಾರಂಭಿಸಲಾಯಿಗಿದ್ದು.
ಇದರ ಯಶಸ್ಸಿನ ನಂತರ, ಮುಂದಿನ ಹಂತದಲ್ಲಿ ದೆಹಲಿ ವಿಮಾನ ನಿಲ್ದಾಣ ಮತ್ತು ಕೊನಾಟ್ ಪ್ಲೇಸ್‌ನಲ್ಲಿ ಫಾಸ್ಟಾಗ್‌ನಿಂದ ಪಾರ್ಕಿಂಗ್ ಶುಲ್ಕವನ್ನು ಪಾವತಿಸುವ ಸೇವೆಯನ್ನು ಪ್ರಾರಂಭಿಸಲಾಗುವುದು. ಮೂಲಗಳ ಪ್ರಕಾರ, ಮುಂದಿನ ಹಂತದಲ್ಲಿ ಇದನ್ನು ಮುಂಬೈ, ಕೋಲ್ಕತಾ, ಚೆನ್ನೈ ಸೇರಿದಂತೆ ದೇಶದ ಹಲವು ನಗರಗಳಲ್ಲಿ ವಿಸ್ತರಿಸಲಾಗುವುದು. ಭವಿಷ್ಯದಲ್ಲಿ ಫಾಸ್ಟಾಗ್ ನಿಂದ ಪೆಟ್ರೋಲ್, ಡೀಸೆಲ್ ಮತ್ತು ಸಿಎನ್ಜಿ ತುಂಬುವ ಸೌಲಭ್ಯವನ್ನೂ ಪ್ರಾರಂಭಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಇದರಲ್ಲಿ, ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (ಆರ್‌ಎಫ್‌ಐಡಿ) ತಂತ್ರಜ್ಞಾನದ ಸಹಾಯವನ್ನು ಸರ್ಕಾರದ ಫಾಸ್ಟ್ಯಾಗ್‌ನಲ್ಲಿ ತೆಗೆದುಕೊಳ್ಳಲಾಗುವುದು.