ಲಾಕಪ್ ನಲ್ಲಿ ರೈತ ಮುಖಂಡರಿಗೆ ಥಳಿತ : ಸಿಪಿಐ, ತಹಶೀಲ್ದಾರ್ ಗೆ ಸೆರೆಮನೆವಾಸ - BC Suddi
ಲಾಕಪ್ ನಲ್ಲಿ ರೈತ ಮುಖಂಡರಿಗೆ ಥಳಿತ : ಸಿಪಿಐ, ತಹಶೀಲ್ದಾರ್ ಗೆ ಸೆರೆಮನೆವಾಸ

ಲಾಕಪ್ ನಲ್ಲಿ ರೈತ ಮುಖಂಡರಿಗೆ ಥಳಿತ : ಸಿಪಿಐ, ತಹಶೀಲ್ದಾರ್ ಗೆ ಸೆರೆಮನೆವಾಸ

ಬೆಂಗಳೂರು : ಕೆಲವೊಂದು ಸಂದರ್ಭಗಳಲ್ಲಿ ಕರ್ತವ್ಯ ನಿರತ ಅಧಿಕಾರಿಗಳು ಸಂಯಮ ಕಳೆದುಕೊಂಡು ಕೆಲವು ಮಾಡಬಾರದ ಕಾರ್ಯ ಮಾಡುತ್ತಾರೆ. ಅದೇ ರೀತಿ 1994ರ ಜೂ.1ರಂದು ಆರ್ ಡಿಸಿಸಿ ಬ್ಯಾಂಕ್ ನೊಂದಿಗೆ ತಡಕಲ್ ಗ್ರಾಮದ ರೈತರ ದಿನಬಳಕೆ ವಸ್ತುಗಳನ್ನು ಅಧಿಕಾರಿಗಳು ಜಪ್ತಿ ಮಾಡಲು ಮುಂದಾಗಿದ್ದರು.

ಇದನ್ನು ತಡೆಯಲು ಯತ್ನಿಸಿದ್ದ ರಾಯಚೂರು ಜಿಲ್ಲೆಯ ಮಾನ್ವಿಯ ಹರವಿ ಗ್ರಾಮದ ರೈತ ಮುಖಂಡ ಶಂಕರಗೌಡ ಹಾಗೂ ಬಸನಗೌಡರನ್ನು ಲಾಕಪ್ ನಲ್ಲಿ ಹಾಕಿ ಥಳಿಸಿ ಜೀವ ಬೆದರಿಕೆಯೊಡ್ಡಿದ್ದರು.ಈ ಹಿನ್ನೆಲೆಯಲ್ಲಿ ಅಂದಿನ ಮಾನ್ವಿ ಸಿಪಿಐ ಕಾಶೀನಾಥ್ ಹಾಗೂ ಮಾನ್ವಿ ತಹಶೀಲ್ದಾರ್ ರಾಮಾಚಾರಿ ವಿರುದ್ಧ ಪ್ರಕರಣ ದಾಖಲಾಗಿತ್ತು.

‘ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ಸರಾಗವಾಗಿ ನಡೆಯಲು ಹೊಸ ಎಸ್‌ಒಪಿ ಜಾರಿ’ – ಸಚಿವ ಸುರೇಶ್‌

ಸದ್ಯ ಸುದೀರ್ಘ ತನಿಖೆ ನಂತರ ಸಿಪಿಐ ಕಾಶೀನಾಥ್ ಹಾಗೂ ತಹಶೀಲ್ದಾರ್ ರಾಮಾಚಾರಿಗೆ ರಾಯಚೂರು 3 ನೇ ಜೆಎಂಎಫ್ ಸಿ ಕೋರ್ಟ್ 3 ವರ್ಷಗಳ ಜೈಲು ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ಮಾನ್ವಿಯ ಕವಿತಾಳ ಠಾಣೆ ಪೊಲೀಸರು ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸಿದ್ದರು.

error: Content is protected !!