ಯುವತಿ ಕುಟುಂಬ ಬೆಳಗಾವಿಯಿಂದ ವಿಜಯಪುರಕ್ಕೆ  ಶಿಫ್ಟ್ - BC Suddi
ಯುವತಿ ಕುಟುಂಬ ಬೆಳಗಾವಿಯಿಂದ ವಿಜಯಪುರಕ್ಕೆ  ಶಿಫ್ಟ್

ಯುವತಿ ಕುಟುಂಬ ಬೆಳಗಾವಿಯಿಂದ ವಿಜಯಪುರಕ್ಕೆ  ಶಿಫ್ಟ್

ಬೆಳಗಾವಿ: ರಮೇಶ ಜಾರಕಿಹೊಳಿಯ ಸೆಕ್ಸ್ ಸಿಡಿ ಪ್ರಕರಣದ ಯುವತಿಯ ಹೆತ್ತವರು ಕುಟುಂಬದ ಎಲ್ಲ ಸದಸ್ಯರ ಸಮೇತ ವಿಜಯಪುರ ಜಿಲ್ಲೆಗೆ ಸ್ಥಳಾಂತರಗೊಂಡಿದ್ದಾರೆ. ಬೆಳಗಾವಿ ನಗರದಲ್ಲಿದ್ದ ಅವರು ಅಲ್ಲಿಂದ ಎ.1 ರಂದು ಮುಂಜಾನೆ ಯುವತಿಯ ಕುಟುಂಬ ವಿಜಯಪುರ ಜಿಲ್ಲೆಯ ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರುವ ಅಜ್ಜಿಯ ಮನೆಗೆ ಶಿಫ್ಟ್ ಆಗಿದೆ.

ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿಡಿಲೇಡಿ ತಾಯಿಯ ತವರು ಮನೆ ಇದ್ದು, ಅದೇ ಮನೆಯಲ್ಲಿ ತಾವು ವಾಸ ಮಾಡುವುದಾಗಿ ಯುವತಿಯ ತಂದೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಶನಿವಾರ ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗಿದ್ದ ಸಂತ್ರಸ್ತ ಯುವತಿಯ ಹೆತ್ತವರು ಮಾ. 28 ರಂದು ಎಸ್ಐಟಿ ಅಧಿಕಾರಿಗಳೊಂದಿಗೆ ಬೆಂಗಳೂರಿಂದ ಬೆಳಗಾವಿಗೆ ಬಂದಿದ್ದರು.

ಪೊಲೀಸ್ ಬಿಗಿ ಭದ್ರತೆಯಲ್ಲಿ ಬೆಳಗಾವಿಯಿಂದ ನಿಡಗುಂದಿ ಪಟ್ಟಣಕ್ಕೆ ಆಗಮಿಸಿದ ಯುವತಿಯ ಕುಟುಂಬಕ್ಕೆ ಸ್ಥಳೀಯ ಪೊಲೀಸರು‌ ಭದ್ರತೆ ನೀಡಿದ್ದು, ಮನೆಯ ಬಳಿ ನಾಲ್ಕಾರು ಪೊಲೀಸರು ಕಾವಲು ನಿಂತಿದ್ದಾರೆ.

ಸಿಎಂ ವಿರುದ್ಧ ಹೈಕಮಾಂಡ್ ಗೆ ದೂರು ನೀಡಿದ ಈಶ್ವರಪ್ಪ: ಭುಗಿಲೆದ್ದ ಭಿನ್ನಮತ

error: Content is protected !!