ಸುಳ್ಳು ಸುದ್ದಿ ಟ್ವೀಟ್ ಮಾಡಿ ಪೇಚಿಗೆ ಸಿಲುಕಿದ ತರೂರ್ - BC Suddi
ಸುಳ್ಳು ಸುದ್ದಿ ಟ್ವೀಟ್ ಮಾಡಿ ಪೇಚಿಗೆ ಸಿಲುಕಿದ ತರೂರ್

ಸುಳ್ಳು ಸುದ್ದಿ ಟ್ವೀಟ್ ಮಾಡಿ ಪೇಚಿಗೆ ಸಿಲುಕಿದ ತರೂರ್

ಹೊಸದಿಲ್ಲಿ : ಸುಳ್ಳು ಸುದ್ದಿ ಮಾಡಿ ಅನೇಕ ಬಾರಿ ಪೇಚಿಗೆ ಸಿಲುಕಿದ್ದ ಕಾಂಗ್ರೆಸ್ ನಾಯಕ ಶಶಿ ತರೂರ್ ಈಗ, ಮತ್ತೊಂದು ಸುಳ್ಳು ಸುದ್ದಿ ಟ್ವೀಟ್ ಮಾಡಿ ಮುಜುಗರ ಎದುರಿಸುತ್ತಿದ್ದಾರೆ.

ಇವರು ಮಾಡಿದ್ದೇನು ಗೊತ್ತೇ? ಲೋಕಸಭಾ , ಮಾಜಿ ಸ್ಪೀಕರ್ ಶ್ರೀಮತಿ ಸುಮಿತ್ರಾ ಮಹಾಜನ್ ನಿಧನರಾಗಿದ್ದಾರೆಂದು ಟ್ವೀಟ್ ಮಾಡಿದ್ದಲ್ಲದೆ ಅವರ ನಿಧನಕ್ಕೆ ಶ್ರದ್ಧಾಂಜಲಿ ಕೂಡ ಸಲ್ಲಿಸಿದ್ದಾರೆ.

”ಸುಮಿತ್ರಾ ಅವರ ನಿಧನದಿಂದ ನನಗೆ ತೀವ್ರ ದುಃಖವಾಗಿದೆ. ದಿ. ಸುಷ್ಮಾ ಸ್ವರಾಜ್ ಹಾಗೂ ಸುಮಿತ್ರಾ ಮಹಾಜನ್ ಅವರೊಂದಿಗಿನ ಸಕಾರಾತ್ಮಕ ಸಂವಾದಗಳು ಇನ್ನೂ ನನ್ನ ಸೃತಿಪಟಲದಲ್ಲಿದೆ. ಸುಮಿತ್ರಾ ಅವರ ಆತ್ಮಕ್ಕೆ ದೇವರು ಶಾಂತಿ ನೀಡಲು ಹಾಗೂ ಅವರ ಅಗಲಿಕೆ ದುಃಖವನ್ನು ಭರಿಸಿವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ” ಎಂದು ತರೂರ ಟ್ವೀಟ್ ನಲ್ಲಿ ಹೇಳಿದ್ದಾರೆ.

ಆದರೆ ಇದು ಅಪ್ಪಟ ಸುಳ್ಳು ಸುದ್ದಿ. ಸುಮಿತ್ರಾ ಮಹಾಜನ್ ಆರೋಗ್ಯವಾಗಿದ್ದಾರೆ. ಅವರಿಗೆ ದೇವರು ಹೆಚ್ಚಿನ ಆಯುರಾರೋಗ್ಯ ನೀಡಲಿ ಎಂದು ಬಿಜೆಪಿ ನಾಯಕ ಕೈಲಾಸ್ ವಿಜಯ್ ವರ್ಗೀಯ ಟ್ವೀಟ್ ಮಾಡಿ ಸ್ಪಷ್ಟಪಡಿಸಿದ ನಂತರ, ಶಶಿ ತರೂರ್ ಕ್ಷಮಾರ್ಪಣೆ ಕೇಳಿದ್ದಾರೆ.

ದುರಂತವೆಂದರೆ ತರೂರ್ ಟ್ವೀಟ್ ನಂಬಿ ಎನ್ಸಿಪಿ ಅಧ್ಯಕ್ಷ ಶರದ್ ಪವಾರ್, ಸುಪ್ರಿಯಾ ಸುಳೆ ಸೇರಿದಂತೆ ಅನೇಕರು ಸುಮಿತ್ರಾ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿ ಪೇಚಿಗೆ ಸಿಲುಕಿದ್ದಾರೆ.

ಗುರವಾರ ಮಧ್ಯರಾತ್ರಿಯ ತರೂರ್ ಟ್ವೀಟ್ ಆಧರಿಸಿ ಹಿಂದೂಸ್ತಾನ್ ಟೈಮ್ಸ್ ಹಾಗೂ ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆಗಳು ಸುಮಿತ್ರಾ ಅವರ ನಿಧನ ಸುದ್ದಿ ಪ್ರಕಟಿಸಿ, ಅದು ಸುಳ್ಳು ಎಂಬ ವಿಷಯ ಗಮನಕ್ಕೆ ಬರುತ್ತಲೆ ವಿಷಯಾದ ವ್ಯಕ್ತಪಡಿಸಿ ಸುಮಿತ್ರಾ ಅವರ ಕ್ಷಮಾರ್ಪಣೆ ಕೇಳಿವೆ.

ಸುಳ್ಳು ಸುದ್ದಿಗಳ ಜನಕ ಪತ್ರಕರ್ತ ರಾಜದೀಪ್ ಸರದೇಸಾಯಿ ಈ ಹಿಂದೆ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಬದುಕಿದ್ದಾಗಲೇ ಅವರು ಮೃತಪಟ್ಟಿದ್ದಾರೆಂದು ಟ್ವೀಟ್ ಮಾಡಿ ಎಡವಟ್ಟು ಮಾಡಿಕೊಂಡು ನಂತರ ಕ್ಷಮೆ ಕೇಳಿದ್ದರು.