ಅಸ್ಸಾಂ : ಬಿಜೆಪಿ ಅಭ್ಯರ್ಥಿ ಕಾರಲ್ಲಿ ಇವಿಎಂ ಪತ್ತೆ ಪ್ರಕರಣ - ನಾಲ್ವರನ್ನು ಅಮಾನತುಗೊಳಿಸಿದ ಆಯೋಗ - BC Suddi
ಅಸ್ಸಾಂ : ಬಿಜೆಪಿ ಅಭ್ಯರ್ಥಿ ಕಾರಲ್ಲಿ ಇವಿಎಂ ಪತ್ತೆ ಪ್ರಕರಣ – ನಾಲ್ವರನ್ನು ಅಮಾನತುಗೊಳಿಸಿದ ಆಯೋಗ

ಅಸ್ಸಾಂ : ಬಿಜೆಪಿ ಅಭ್ಯರ್ಥಿ ಕಾರಲ್ಲಿ ಇವಿಎಂ ಪತ್ತೆ ಪ್ರಕರಣ – ನಾಲ್ವರನ್ನು ಅಮಾನತುಗೊಳಿಸಿದ ಆಯೋಗ

ನವದೆಹಲಿ: ಅಸ್ಸಾಂನಲ್ಲಿ ಗುರುವಾರ ಎರಡನೇ ಹಂತದ ಮತದಾನ ಮುಕ್ತಾಯವಾಗಿ ಕೆಲವೇ ಗಂಟೆಗಳಲ್ಲಿ ಬಿಜೆಪಿ ಅಭ್ಯರ್ಥಿಯ ಕಾರಿನಲ್ಲಿ ವಿದ್ಯುನ್ಮಾನ ಮತ ಯಂತ್ರ(ಇವಿಎಂ)ಗಳು ಪತ್ತೆಯಾಗಿದ್ದು, ನಾಲ್ವರು ಅಧಿಕಾರಿಗಳನ್ನು ಆಯೋಗವು ಅಮಾನತುಗೊಳಿಸಿದೆ.

ಈ ಕುರಿತು ಅಸ್ಸಾಂ ಮೂಲದ ಪತ್ರಕರ್ತ ಅತಾನು ಭುಯಾನ್‌ ಇವಿಎಂಗಳಿರುವ ಕಾರಿನ ವಿಡಿಯೋವನ್ನು ಟ್ವೀಟ್ ಮಾಡಿದ್ದು, ಈ ಘಟನೆಯ ಬಳಿಕ ಪಥರ್‌ಕಾಂಡಿ ಕ್ಷೇತ್ರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ’ ಎಂದಿದ್ದಾರೆ.

ಇವಿಎಂಗಳಿದ್ದ ಬೊಲೆರೊ ಕಾರು ಬಿಜೆಪಿ ಅಭ್ಯರ್ಥಿ ಕೃಷ್ಣೆಂದು ಪೌಲ್‌ ಅವರಿಗೆ ಸೇರಿದ್ದು ಎಂದು ಆರೋಪಿಸಲಾಗಿದೆ.

ದೊಡ್ಡಬಳ್ಳಾಪುರ: ಮಗನಿಂದ ಸೆಕ್ಸ್‌ ದೋಖಾ: ಯುವತಿ ಕಿರುಕುಳಕ್ಕೆ ಮನವೊಂದು ಉದ್ಯಮಿ ಆತ್ಮಹತ್ಯೆಗೆ ಶರಣು

ಇನ್ನು “ಈ ಘಟನೆಗೆ ಸಂಬಂಧಿಸಿದಂತೆ ಇಂಥ ದೂರುಗಳ ಬಗ್ಗೆ ಚುನಾವಣಾ ಆಯೋಗ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕು”ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಒತ್ತಾಯಿಸಿದ್ದಾರೆ.

error: Content is protected !!