ಬೆಂಗಳೂರು:  'ಕಳೆದ ವರ್ಷ ಸ್ಥಾಪಿಸಿದ್ದ 1,100 ಬೆಡ್‌ಗಳ ಕೋವಿಡ್ ಆಸ್ಪತ್ರೆಯ ಕಥೆ ಏನಾಯಿತು'? : ದಿನೇಶ್​ ಗುಂಡುರಾವ್ - BC Suddi
ಬೆಂಗಳೂರು:  ‘ಕಳೆದ ವರ್ಷ ಸ್ಥಾಪಿಸಿದ್ದ 1,100 ಬೆಡ್‌ಗಳ ಕೋವಿಡ್ ಆಸ್ಪತ್ರೆಯ ಕಥೆ ಏನಾಯಿತು’? : ದಿನೇಶ್​ ಗುಂಡುರಾವ್

ಬೆಂಗಳೂರು:  ‘ಕಳೆದ ವರ್ಷ ಸ್ಥಾಪಿಸಿದ್ದ 1,100 ಬೆಡ್‌ಗಳ ಕೋವಿಡ್ ಆಸ್ಪತ್ರೆಯ ಕಥೆ ಏನಾಯಿತು’? : ದಿನೇಶ್​ ಗುಂಡುರಾವ್

ಬೆಂಗಳೂರು: ಕೊರೊನಾ ಮೊದಲ ಅಲೆಯ ಸಂದರ್ಭ ಸೋಂಕಿತರಿಗಾಗಿ ತುಮಕೂರು ರಸ್ತೆಯ ಬಿಐಇಸಿಯಲ್ಲಿ ಸ್ಥಾಪಿಸಿದ್ದ 1,100 ಬೆಡ್‌ಗಳ ಕೋವಿಡ್ ಆಸ್ಪತ್ರೆಯ ಕಥೆ ಎನಾಯಿತು ಎಂದು ಕಾಂಗ್ರೆಸ್ ಮುಖಂಡ ದಿನೇಶ್​ ಗುಂಡುರಾವ್, ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಈ ಬಗ್ಗೆ ತಮ್ಮ ಟ್ವಿಟರ್ ಖಾತೆ ಮೂಲ್ಕ ಟ್ವೀಟ್ ಮಾಡಿದ ಅವರು” ಯುದ್ಧ ಕಾಲೇ ಶಸ್ತ್ರಭ್ಯಾಸ ಎಂಬಂತೆ ಸೋಂಕಿತರ ಚಿಕಿತ್ಸೆಗೆ ಈಗ ಪರಿಪಾಟಲು ಪಡುತ್ತಿರುವ ಸರ್ಕಾರ, ಕಳೆದ ವರ್ಷ ತುಮಕೂರು ರಸ್ತೆಯ ಬಿಐಇಸಿಯಲ್ಲಿ ಸ್ಥಾಪಿಸಿದ್ದ 1,100 ಬೆಡ್‌ಗಳ ಕೋವಿಡ್ ಆಸ್ಪತ್ರೆಯ ಕಥೆ ಏನಾಯ್ತು ಎಂದು ತಿಳಿಸಲಿ, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಟ್ಟಿಸಿದ ಆ ಆಸ್ಪತ್ರೆ ಈಗ ಕಾರ್ಯನಿರ್ವಹಿಸುತ್ತಿಲ್ಲವೆ..?ಸರ್ಕಾರ ಉತ್ತರಿಸಲಿ “ಎಂದು ಸರ್ಕಾರವನ್ನು ತಿವಿದಿದ್ದಾರೆ.

“ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳ ನಡುವೆ ಬೆಡ್​ಗಾಗಿ ಕಚ್ಚಾಟ ಶುರುವಾಗಿದೆ. ಸೋಂಕಿತರ ಚಿಕಿತ್ಸೆಗೆ 75%ರಷ್ಟು ಬೆಡ್ ಮೀಸಲಿಡಬೇಕೆಂಬ ಆದೇಶವನ್ನು ಖಾಸಗಿ ಆಸ್ಪತ್ರೆಗಳು ಧಿಕ್ಕರಿಸುವ ಮಾತನಾಡಿವೆ. ಇತ್ತ ಸರ್ಕಾರ ಸೋಂಕಿತರ ಚಿಕಿತ್ಸೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಂಪೂರ್ಣ ಸೋತಿದೆ. ಹೀಗಾದರೆ ಸೋಂಕಿತರ ಪಾಡೇನು..?” ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕದಲ್ಲಿ ಕೊರೊನಾ ಸೋಂಕಿನ ಬೆನ್ನಲ್ಲೇ ಆಕ್ಸಿಜನ್ ಕೊರತೆ ಕೂಡ ಇದೆ: ರಾಜ್ಯ ಸರ್ಕಾರ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದೆ: ಯು.ಟಿ. ಖಾದರ್