ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡ ಮಾಡಿದ ತಪ್ಪನ್ನೇ ನೀವಿಲ್ಲಿ ಮಾಡುತ್ತಿದ್ದೀರಿ: ಮೈಕಲ್ ವಾನ್ - BC Suddi
ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡ ಮಾಡಿದ ತಪ್ಪನ್ನೇ ನೀವಿಲ್ಲಿ ಮಾಡುತ್ತಿದ್ದೀರಿ: ಮೈಕಲ್ ವಾನ್

ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡ ಮಾಡಿದ ತಪ್ಪನ್ನೇ ನೀವಿಲ್ಲಿ ಮಾಡುತ್ತಿದ್ದೀರಿ: ಮೈಕಲ್ ವಾನ್

ಅಹಮದಾಬಾದ್: ನೀವು ವಿಶ್ವ ಶ್ರೇಷ್ಠ ತಂಡದ ಎದುರು ಆಡುತ್ತಿದ್ದೀರಿ. ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡ ಮಾಡಿದ ತಪ್ಪನ್ನೇ ನೀವಿಲ್ಲಿ ಮಾಡುತ್ತಿದ್ದೀರಿ. ಇಂಗ್ಲೆಂಡ್    ತಂಡ ಟೆಸ್ಟ್ ಕ್ರಿಕೆಟ್ ನಲ್ಲಿ ಉತ್ತಮ ತಂಡವನ್ನು ಆಡಿಸಿರಲಿಲ್ಲ. ಇದೀಗ ಭಾರತ ತಂಡವೂ ಉತ್ತಮವಾಗಿಲ್ಲ. ಸೂರ್ಯಕುಮಾರ್ ಯಾದವ್ ರನ್ನು ತಂಡದಿ0ದ ಕೈ ಬಿಟ್ಟಿದ್ದು ಮತ್ತು ತಂಡದ ಬ್ಯಾಟಿಂಗ್ ಆರ್ಡರ್ ನಲ್ಲಿ ಬದಲಾವಣೆ ಮಾಡಿದ ಕಾರಣಕ್ಕೆ ಭಾರತ ತಂಡ ಸೋಲನುಭವಿಸತು ಎಂದು ವಾನ್ ಅಭಿಪ್ರಾಯಪಟ್ಟಿದ್ದಾರೆ.

ಇಂಗ್ಲೆಂಡ್ ವಿರುದ್ದದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸೋಲನುಭವಿಸಿದ ಬಳಿಕ ಇಂಗ್ಲೆಂಡ್ ಕ್ರಿಕೆಟ್ ತಂಡ ಮಾಜಿ ನಾಯಕ ಮೈಕಲ್ ವಾನ್ ಟೀಂ ಇಂಡಿಯಾದ ಆಯ್ಕೆ ಪ್ರಕ್ರಿಯೆ ಬಗ್ಗೆ ಟೀಕೆ ಮಾಡಿದ್ದಾರೆ. ಮೂರನೇ ಟಿ೨೦ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆ ಮಾಡಲಾಗಿತ್ತು. ಸೂರ್ಯಕುಮಾರ್ ಯಾದವ್ ಬದಲಿಗೆ ಉಪ ನಾಯಕ ರೋಹಿತ್ ಶರ್ಮಾ ಆಡಿದ್ದರು.

ರೋಹಿತ್ ತಂಡಕ್ಕೆ ಆಯ್ಕೆಯಾದ ಕಾರಣ ಎರಡನೇ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಇಶಾನ್ ಕಿಶಾನ್ ಮೂರನೇ ಕ್ರಮಾಂಕದಲ್ಲಿ ಆಡಿದ್ದರು. ನಾಯಕ ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ದರು. ಮೂರನೇ ಟಿ 20 ಪಂದ್ಯದಲ್ಲಿ ಭಾರತ ತಂಡ ಎಂಟು ವಿಕೆಟ್ ಅಂತರದ ಸೋಲನುಭವಿಸಿತ್ತು. ಇಂಗ್ಲೆಂಡ್ ತಂಡ ಸರಣಿಯಲ್ಲಿ 2-1 ಅಂತರದಲ್ಲಿ ಮುನ್ನಡೆಯಲ್ಲಿದ್ದು, ನಾಲ್ಕನೇ ಪಂದ್ಯ ಗುರುವಾರ ಸಂಜೆ ನಡೆಯಲಿದೆ.

 

error: Content is protected !!