ಕಾಶ್ಮೀರದ ಹಲವು ಕಡೆ ಎನ್‌ಕೌಂಟರ್‌ - ಮೂವರು ಉಗ್ರರು ಮೃತ್ಯು, ನಾಲ್ವರು ಯೋಧರಿಗೆ ಗಾಯ - BC Suddi
ಕಾಶ್ಮೀರದ ಹಲವು ಕಡೆ ಎನ್‌ಕೌಂಟರ್‌ – ಮೂವರು ಉಗ್ರರು ಮೃತ್ಯು, ನಾಲ್ವರು ಯೋಧರಿಗೆ ಗಾಯ

ಕಾಶ್ಮೀರದ ಹಲವು ಕಡೆ ಎನ್‌ಕೌಂಟರ್‌ – ಮೂವರು ಉಗ್ರರು ಮೃತ್ಯು, ನಾಲ್ವರು ಯೋಧರಿಗೆ ಗಾಯ

ಶ್ರೀನಗರ: ಭದ್ರತಾ ಹಾಗೂ ಉಗ್ರರ ನಡುವೆ ಎರಡು ಪ್ರತ್ಯೇಕ ಎನ್‌‌ಕೌಂಟರ್‌‌ ನಡೆದಿದ್ದು, ಮೂವರು ಉಗ್ರರು ಸಾವನ್ನಪ್ಪಿದ್ದು, ನಾಲ್ವರು ಯೋಧರು ಗಾಯಗೊಂಡಿರುವ ಘಟನೆ ದಕ್ಷಿಣ ಕಾಶ್ಮೀರದ ಶೋಪಿಯಾನ್‌ ಹಾಗೂ ಪುಲ್ವಾಮಾ ಜಿಲ್ಲೆಯಲ್ಲಿ ನಡೆದಿದೆ.

ಎಪ್ರಿಲ್‌‌ 8ರ ಗುರುವಾರ ಶೋಪಿಯಾನ್‌ ಪಟ್ಟಣದಲ್ಲಿ ಎನ್‌ಕೌಂಟರ್‌ ನಡೆದಿದ್ದು, ಇದರಲ್ಲಿ ಮೂವರು ಉಗ್ರರು ಸಾವನ್ನಪ್ಪಿದ್ದಾರೆ. ಉಳಿದ ಇಬ್ಬರು ಉಗ್ರರು ಶೋಪಿಯಾನ್‌‌ನ ಜಾನ್‌ ಮೊಹಲ್ಲಾದ ಸ್ಥಳೀಯ ಮಸೀದಿಯೊಳಗೆ ಅಡಗಿದ್ದಾರೆ ಎನ್ನುವ ಶಂಕೆ ವ್ಯಕ್ತಪಡಿಸಲಾಗಿದೆ. ಎನ್‌‌ಕೌಂಟರ್‌ನಲ್ಲಿ ಅಧಿಕಾರಿ ಸೇರಿದಂತೆ ನಾಲ್ವರು ಸೇನಾ ಸೈನಿಕರು ಗಾಯಗೊಂಡಿದ್ದಾರೆ.

ಶುಕ್ರವಾರ ಮುಂಜಾನೆ ಪುಲ್ವಾಮಾ ಜಿಲ್ಲೆಯ ತ್ರಾಲ್‌ ಪ್ರದೇಶದಲ್ಲಿ ಎರಡನೇ ಎನ್‌ಕೌಂಟರ್‌‌ ನಡೆದಿದ್ದು, 2-3 ಭಯೋತ್ಪಾದಕರು ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ಎರಡೂ ಜಿಲ್ಲೆಗಳಲ್ಲಿ ಇಂಟರ್‌ನೆಟ್‌ ಸೇವೆಗಳನ್ನು ಕಡಿತಗೊಳಿಸಲಾಗಿದೆ.

error: Content is protected !!