ಹೊಟ್ಟೆ ಮತ್ತು ತಲೆಮೇಲೆ ಕಾಲಿಟ್ಟು ನೌಕರರ ವಿನೂತನ ಪ್ರತಿಭಟನೆ - BC Suddi
ಹೊಟ್ಟೆ ಮತ್ತು ತಲೆಮೇಲೆ ಕಾಲಿಟ್ಟು ನೌಕರರ ವಿನೂತನ ಪ್ರತಿಭಟನೆ

ಹೊಟ್ಟೆ ಮತ್ತು ತಲೆಮೇಲೆ ಕಾಲಿಟ್ಟು ನೌಕರರ ವಿನೂತನ ಪ್ರತಿಭಟನೆ

ಬೆಂಗಳೂರು: 6ನೇ ವೇತನ ಆಯೋಗ ಜಾರಿ ಮಾಡುವಂತೆ ಆಗ್ರಹಿಸಿ ಸಾರಿಗೆ ನೌಕರರು ಮಾಡುತ್ತಿರುವ ಮುಷ್ಕರ 8ನೇ ದಿನಕ್ಕೆ ತಲುಪಿದೆ. ಮುಷ್ಕರದ ಮಧ್ಯೆ ಕರ್ತವ್ಯಕ್ಕೆ ಹಾಜರಾದ ಚಾಲಕರಿಗೆ ಹೂವಿನ ಹಾರ ಹಾಕಿ ಅವರ ಕಾಲನ್ನ ತಲೆಮೇಲಿಟ್ಟುಕೊಂಡು ನೌಕರರು ವಿನೂತನ ಪ್ರತಿಭಟನೆ ಮಾಡುತ್ತಿದ್ದಾರೆ.

ಕಳೆದ 8 ದಿನಗಳಿಂದ ಸಾರಿಗೆ ನೌಕರರ ಮುಷ್ಕರ ನಡೆಯುತ್ತಿದೆ. ಆದರೆ ಸರ್ಕಾರ ಮಾತ್ರ ಇದಕ್ಕೆ ಕ್ಯಾರೆ ಅನ್ನುತ್ತಿಲ್ಲ. 6ನೇ ವೇತನ ಆಯೋಗ ಜಾರಿ ಮಾಡೋದು ಸಾಧ್ಯವೇ ಇಲ್ಲ ಎಂದು ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಇಷ್ಟಾದರೂ ತಮ್ಮ ಪಟ್ಟು ಬಿಡದ ನೌಕರರು ದಿನಕ್ಕೊಂದು ರೀತಿಯ ಪ್ರತಿಭಟನೆ ಮಾಡುತ್ತಿದ್ದಾರೆ.

ಮೊನ್ನೆ ತಟ್ಟೆ ಲೋಟ ಪ್ರತಿಭಟನೆ, ನಿನ್ನೆ ಭಿಕ್ಷಾಟನೆ ಮಾಡಿದ್ದಾರೆ. ಅದರಂತೆ ಇಂದು ಮುಷ್ಕರದ ನಡುವೆ ಕೆಲಸಕ್ಕೆ ಹಾಜರಾದ ಸಿಬ್ಬಂದಿಗೆ ಹಾರ ಹಾಕಿ ಅವರ ಕಾಲನ್ನ ತಲೆಯ ಮೇಲೆ ಇರಿಸಿಕೊಂಡು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ವಿಜಯಪುರ, ಗದಗ ಮುಂಡರಗಿ, ಬೆಂಗಳೂರಿನಲ್ಲಿ ಮಾರ್ಗದ ಮಧ್ಯೆ ಬಸ್​ ನಿಲ್ಲಿಸಿ ವಿನೂತನ ಪ್ರತಿಭಟನೆ ಮಾಡುತ್ತಿದ್ದಾರೆ. ನಮ್ಮ ಹೊಟ್ಟೆಮೇಲೆ ಕಾಲಿಟ್ಟಿದ್ದೀರಿ, ನಮ್ಮ ತಲೆ ಮೇಲೆ ಕಾಲಿಡಿ ಅಂತಾ ತಲೆಮೇಲೆ ಕಾಲಿಡಿಸಿಕೊಳ್ಳುತ್ತಿದ್ದಾರೆ.