ದೇಶದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಎದುರಾಗಿದೆ : ಕೇಂದ್ರಕ್ಕೆ ಸುಪ್ರೀಂ ನೋಟಿಸ್ - BC Suddi
ದೇಶದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಎದುರಾಗಿದೆ : ಕೇಂದ್ರಕ್ಕೆ ಸುಪ್ರೀಂ ನೋಟಿಸ್

ದೇಶದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಎದುರಾಗಿದೆ : ಕೇಂದ್ರಕ್ಕೆ ಸುಪ್ರೀಂ ನೋಟಿಸ್

ನವದೆಹಲಿ : ದೇಶದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರ ಕಂಡರಿಯದ ಸಂಕಟ ತಂದಿದೆ. ಸೋಂಕಿತರಿಗೆ ಸಮರ್ಪಕ ಔಷಧಿ, ಆಕ್ಸಿಜನ್, ಬೆಡ್ ಇಲ್ಲದೆ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಈ ಸೋಂಕು ನಿರ್ವಹಿಸಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರ ನೀಡುವಂತೆ ಸುಪ್ರೀಂ ನೋಟಿಸ್ ಜಾರಿಮಾಡಿದೆ.

ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡ ಕೋರ್ಟ್ ದೇಶದಲ್ಲಿ ಪ್ರಸ್ತುತ ರಾಷ್ಟ್ರೀಯ ತುರ್ತು ಪರಿಸ್ಥಿತಿ ಉಂಟಾಗಿದೆ. ದೇಶದಲ್ಲಿ ಎದುರಾಗಿರುವ ಪರಿಸ್ಥಿತಿಗೆ ಸಂಬಂಧಿಸಿ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯ, ಶುಕ್ರವಾರಕ್ಕೆ ವಿಚಾರಣೆ ಮುಂದೂಡಿದೆ.

4 ವಿಚಾರಗಳ ಬಗ್ಗೆ ಸ್ಪಷ್ಟತೆ ಬೇಕು: ಸೋಂಕಿನಿಂದ ದೇಶವು ತತ್ತರಿಸಿಹೋಗಿದೆ. ಕನಿಷ್ಠ 6 ಹೈಕೋರ್ಟ್ಗಳು ಕೋವಿಡ್ ಸಂಬಂಧಿತ ಸಂಪನ್ಮೂಲಗಳ ಕುರಿತು ವಿಚಾರಣೆ ನಡೆಸುತ್ತಿವೆ. ದೆಹಲಿ, ಬಾಂಬೆ, ಸಿಕ್ಕಿಂ, ಮಧ್ಯಪ್ರದೇಶ, ಕಲ್ಕತ್ತಾ ಮತ್ತು ಅಲಹಾಬಾದ್ ಹೈಕೋರ್ಟ್ ಗಳು ಪ್ರಸ್ತುತ ಪರಿಸ್ಥಿತಿಯನ್ನು ಅರಿತು ತಮ್ಮಿಂದಾಗುವಷ್ಟು ಕೆಲಸವನ್ನು ಮಾಡುತ್ತಿವೆ.

ನಮಗೆ ಈಗ 4 ವಿಚಾರಗಳ ಬಗ್ಗೆ ಸ್ಪಷ್ಟತೆ ಬೇಕು. ಆಕ್ಸಿಜನ್ ಪೂರೈಕೆ, ಅತ್ಯವಶ್ಯಕ ಔಷಧಗಳ ಸರಬರಾಜು, ಲಸಿಕೆ ವಿತರಣೆಯ ವಿಧಾನ ಹಾಗೂ ಲಾಕ್ ಡೌನ್ ಘೋಷಿಸುವ ಅಧಿಕಾರದ ಬಗ್ಗೆ “ರಾಷ್ಟ್ರೀಯ ಯೋಜನೆ’ ಸಿದ್ಧಪಡಿಸಿ ನಮ್ಮ ಮುಂದಿಡಿ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ, ನ್ಯಾಯಮೂರ್ತಿಗಳಾದ ಎಲ್.ಎನ್.ರಾವ್, ಎಸ್.ಆರ್. ಭಟ್ ಅವರನ್ನೊಳಗೊಂಡ ನ್ಯಾಯಪೀಠ ಸೂಚಿಸಿದೆ. ಲಾಕ್ಡೌನ್ ಘೋಷಿಸುವ ಅಧಿಕಾರವಿರುವುದು ಸರಕಾರಗಳಿದೇ ವಿನಹಾ ಕೋರ್ಟ್ ಗಳಿಗಲ್ಲ ಎಂದೂ ಸ್ಪಷ್ಟಪಡಿಸಿದೆ.

ಸೋಂಕಿತರಿಗೆ ಅಗತ್ಯವಾಗಿರುವ ಬೆಡ್, ಆಕ್ಸಿಜನ್, ಔಷಧ, ಲಸಿಕೆ ಮೊದಲಾದವುಗಳು ಸಮರ್ಪಕವಾಗಿ ದೊರೆಯದಿರುವುದಕ್ಕೆ ದೇಶದ ಪ್ರಸ್ತುತ ಸ್ಥಿತಿಯು ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತಿದೆ. ಎಂದು ಸುಪ್ರೀಂ ಕಳವಳ ವ್ಯಕ್ತಪಡಿಸಿದೆ.