ಸಪೋಟಾ ಹಣ್ಣು ತಿನ್ನುವುದರಿಂದ ದೇಹಕ್ಕೆ ಇಷ್ಟೆಲ್ಲಾ ……….! - BC Suddi
ಸಪೋಟಾ ಹಣ್ಣು ತಿನ್ನುವುದರಿಂದ ದೇಹಕ್ಕೆ ಇಷ್ಟೆಲ್ಲಾ ……….!

ಸಪೋಟಾ ಹಣ್ಣು ತಿನ್ನುವುದರಿಂದ ದೇಹಕ್ಕೆ ಇಷ್ಟೆಲ್ಲಾ ……….!

 

ಸಪೋಟಾ ಹಣ್ಣಿನಲ್ಲಿ  ಅನೇಕ ವಿಧವಾದ ಗುಣಗಳು ಅಡಗಿವೆ. ಇದರಲ್ಲಿ ಪ್ರಕ್ಟೋಸ್, ಸುಕ್ರೋಸ್, ಸಕ್ಕರೆ ಅಂಶ ಸಮೃದ್ದಿಯಾಗಿದೆ.

ರಕ್ತಹೀನತೆಯಿಂದ ಬಳಲುತ್ತಿರುವವರು ಸಪೋಟಾವನ್ನು ತಿನ್ನುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.

ಸಪೋಟಾ ಹಣ್ಣನ್ನು ಹೆಚ್ಚಾಗಿ ಸೇವಿಸಿದರೆ ದೃಷ್ಟಿ ದೋಷಗಳು ಸಹ ದೂರವಾಗುತ್ತದೆ.  ಪ್ರತಿ ದಿನ ಒಂದು ಸಪೋಟಾವನ್ನು ತಿನ್ನುತ್ತಾ ಬಂದರೆ ರೋಗನಿರೋಧಕ ಶಕ್ತಿ ಹೆಚ್ಚಾಗುವುದಲ್ಲದೆ ಶ್ವಾಸಕೋಶಕ್ಕೂ ಒಳ್ಳೆಯದು. ಸಪೋಟಾದಲ್ಲಿ ರಕ್ತವೃದ್ಧಿ, ಪುಷ್ಠಿಯನ್ನು ನೀಡುವ ಅಂಶಗಳಲ್ಲದೆ ಎಷ್ಟೋ ಔಷಧೀಯ ಗುಣಗಳು ಇವೆ.

ಅಷ್ಟೇ ಅಲ್ಲದೆ ಸಪೋಟಾದಲ್ಲಿ ಶರೀರಕ್ಕೆ ಅಗತ್ಯವಿರುವ ವಿಟಮಿನ್‌, ಖನಿಜ, ನಾರಿನಂಶ, ಕ್ಯಾಲ್ಸಿಯಂ, ಕೆರೊಟನಾಯ್ಡ್, ಪ್ರೊಟೀನ್‌, ಕಾರ್ಬೋಹೈಡ್ರೇಟ್‌, ಫಾಸ್ಪರಸ್ ಸಮೃದ್ಧಿಯಾಗಿದೆ. ಆಯಂಟಿ ಬ್ಯಾಕ್ಟೀರಿಯಲ್, ಆಯಂಟಿ ವೈರಸ್ ಗುಣಗಳು ಕೂಡಾ ಇದರಲ್ಲಿ ಹೆಚ್ಚಾಗಿವೆ.  ಸಪೋಟಾದಲ್ಲಿ ವಿಟಮಿನ್ – ಎ, ವಿಟಮಿನ್ – ಸಿ ಹೆಚ್ಚಾಗಿರುವುದರಿಂದ ಶರೀರಕ್ಕೆ ಆಯಂಟಿ ಆಕ್ಸಿಡೆಂಟ್‌ಗಳು ಲಭಿಸುತ್ತವೆ.

ಸಪೋಟಾ ಮಲಬದ್ದತೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಗರ್ಭಿಣಿಯರು, ವೃದ್ಧರು ಪ್ರತಿದಿನ ಸಪೋಟಾ ಹಣ್ಣನ್ನು ತಿಂದರೆ ಶರೀರಕ್ಕೆ ಅಗತ್ಯವಿರುವ ಕಬ್ಬಿಣಾಂಶ ದೊರಕುತ್ತದೆ. ಇದರಲ್ಲಿರುವ ಪೋಟಾಷಿಯಂ, ಮೆಗ್ನೀಷಿಯಂ ಹೃದಯಕ್ಕೂ ಸಹ ಒಳ್ಳೆಯದು.

 

 

 

error: Content is protected !!