ಅನಾಥಾಶ್ರಮ ಮಕ್ಕಳೊಂದಿಗೆ ಈಸ್ಟರ್‌ ಭೋಜನ ಸವಿದು ಪ್ರಿಯಾಂಕಾಗೆ ವಿಡಿಯೋ‌ ಕಾಲ್‌ ಮಾಡಿದ ರಾಹುಲ್ - BC Suddi
ಅನಾಥಾಶ್ರಮ ಮಕ್ಕಳೊಂದಿಗೆ ಈಸ್ಟರ್‌ ಭೋಜನ ಸವಿದು ಪ್ರಿಯಾಂಕಾಗೆ ವಿಡಿಯೋ‌ ಕಾಲ್‌ ಮಾಡಿದ ರಾಹುಲ್

ಅನಾಥಾಶ್ರಮ ಮಕ್ಕಳೊಂದಿಗೆ ಈಸ್ಟರ್‌ ಭೋಜನ ಸವಿದು ಪ್ರಿಯಾಂಕಾಗೆ ವಿಡಿಯೋ‌ ಕಾಲ್‌ ಮಾಡಿದ ರಾಹುಲ್

ವಯನಾಡ್: ಕಾಂಗ್ರೆಸ್ ನಾಯಕ, ವಯನಾಡ್ ಕ್ಷೇತ್ರದ ಸಂಸದ ರಾಹುಲ್ ಗಾಂಧಿ ವಿಧಾನಸಭಾ ಚುನಾವಣೆಯ ಹಿನ್ನೆಲೆ ಕೇರಳದಲ್ಲಿದ್ದು ಈಸ್ಟರ್ ಹಬ್ಬವನ್ನು ವಯನಾಡಿನ ಜೀವನ ಜ್ಯೋತಿ ಅನಾಥಾಶ್ರಮದಲ್ಲಿ ಔತಣಕೂಟ ನಡೆಸುವುದರ ಮೂಲಕ ಮಕ್ಕಳೊಂದಿಗೆ ಆಚರಿಸಿದರು.

ಮಕ್ಕಳ ಜೊತೆಯಲ್ಲೇ ಊಟಕ್ಕೆ ಕುಳಿತು ಊಟ ಮಾಡಿದ ರಾಹುಲ್‌ ಗಾಂಧಿ ಅವರು ಊಟದ ಮಧ್ಯೆಯೇ ತಮ್ಮ ಮೊಬೈಲ್‌ನಲ್ಲಿ ಸಹೋದರಿ ಪ್ರಿಯಾಂಕಾ ಗಾಂಧಿಗೆ ವಿಡಿಯೋ ಕರೆ ಮಾಡಿ ಮಾತನಾಡಿದ್ದಾರೆ. ಹಾಗೆಯೇ ತಮ್ಮ ಹತ್ತಿರವಿದ್ದ ಮಕ್ಕಳೊಂದಿಗೆ ಮಾತನಾಡಿಸಿದ್ದಾರೆ.

ಹೆಣ್ಣು ಮಗಳೊಬ್ಬಳು ಪ್ರಿಯಾಂಕಾ ಗಾಂಧಿ ಅವರೊಂದಿಗೆ ವಿಡಿಯೋ ಕರೆಯಲ್ಲಿ ಮಾತನಾಡಿದ್ದು ಪರಸ್ಪರ ಇಬ್ಬರು ಕುಶಲೋಪರಿ ವಿಚಾರಿಸಿದ್ದಾರೆ.

ಇನ್ನು ಇದಕ್ಕೂ ಮುನ್ನ ರಾಹುಲ್‌ ಗಾಂಧಿ ಅವರು ಟ್ವೀಟರ್‌ ಮೂಲಕ ಈಸ್ಟರ್‌ ಹಬ್ಬಕ್ಕೆ ಶುಭಕೋರಿದ್ದು, ಭರವಸೆ ಮತ್ತು ಹೊಸ ಆರಂಭದ ಪ್ರತೀಕವಾದ ಈಸ್ಟರ್ ಹಬ್ಬದ ಶುಭಾಶಯಗಳು ಎಂದು ಬರೆದಿದ್ದರು.

ಪ್ರಿಯಾಂಕಾ ಗಾಂಧಿ ಅವರು ಇದಕ್ಕೂ ಮುನ್ನ ವಯನಾಡ್ ಲೋಕಸಭಾ ಕ್ಷೇತ್ರ ಮತ್ತು ಕೇರಳದ ಜನತೆಗೆ ಈಸ್ಟರ್ ಶುಭಾಶಯಗಳು ಎಂದು ವಿಡಿಯೋ ಮೂಲಕ ಶುಭಕೋರಿದ್ದು ಇದು ತೀವ್ರ ಟೀಕೆಗೆ ಗುರಿಯಾಗಿತ್ತು. ಕೇವಲ ವಯನಾಡ್ ಮತ್ತು ಕೇರಳದ ಜನರಿಗೆ ಮಾತ್ರ ಶುಭಾಶಯ ಕೋರಿದ್ದು ಯಾಕೆ ಎಂದು ಹಲವರು ಪ್ರಶ್ನಿಸಿದ್ದರು.

 

error: Content is protected !!