ಒಳ್ಳೊಳ್ಳೆ ಬಟ್ಟೆ ಧರಿಸಿ, ಮನೆಯಲ್ಲಿ ಕುಳಿತುಕೊಳ್ಳಿ: ನಟಿ ವಿದ್ಯಾ ಬಾಲನ್‌ - BC Suddi
ಒಳ್ಳೊಳ್ಳೆ ಬಟ್ಟೆ ಧರಿಸಿ, ಮನೆಯಲ್ಲಿ ಕುಳಿತುಕೊಳ್ಳಿ: ನಟಿ ವಿದ್ಯಾ ಬಾಲನ್‌

ಒಳ್ಳೊಳ್ಳೆ ಬಟ್ಟೆ ಧರಿಸಿ, ಮನೆಯಲ್ಲಿ ಕುಳಿತುಕೊಳ್ಳಿ: ನಟಿ ವಿದ್ಯಾ ಬಾಲನ್‌

ಬೆಂಗಳೂರು: “ಒಳ್ಳೊಳ್ಳೆ ಬಟ್ಟೆ ಧರಿಸಿ, ಮನೆಯಲ್ಲಿ ಕುಳಿತುಕೊಳ್ಳಿ” ಎಂದು ಬಾಲಿವುಡ್‌ ನಟಿ ವಿದ್ಯಾ ಬಾಲನ್‌ ಅವರು ಫೋಟೊಶೂಟ್‌ ತುಣುಕಿನ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ವಿದ್ಯಾ ಬಾಲನ್‌, “ಒಳ್ಳೊಳ್ಳೆ ಬಟ್ಟೆ ಧರಿಸಿ, ಮನೆಯಲ್ಲಿ ಕುಳಿತುಕೊಳ್ಳಿ” ಎಂದು ಬರೆದುಕೊಂಡಿದ್ದಾರೆ.

ಅತ್ಯುತ್ತಮ ಬ್ರ್ಯಾಂಡ್‌ನ ಬಟ್ಟೆಗಳಿದ್ದರೂ ಸಾರ್ವಜನಿಕ ಓಡಾಟ, ಒಡನಾಟಗಳನ್ನು ಕೊರೊನಾ ನಿಯಂತ್ರಿಸಿದ್ದು, ದೊಡ್ಡ ಸಮಾರಂಭಗಳು ಸಹ ವರ್ಚ್ಯುವಲ್‌ ಆಗುತ್ತಿವೆ, ಇಂಥ ಸಂದರ್ಭದಲ್ಲಿ ಡಿಸೈನರ್‌ ಡ್ರೆಸ್‌ಗಳನ್ನು ಹಾಕಿಕೊಂಡರೂ ಕಾರ್ಯಕ್ರಮಗಳಲ್ಲಿ ಭಾಗಿಯಾಗದಿರುವುದಕ್ಕೆ ವಿದ್ಯಾ ಅವರು ಬರೆದ ಸಾಲುಗಳು ಧ್ವನಿಸುತ್ತಿರುವಂತಿದೆ.

ಇನ್ನು ಕಳೆದ ವರ್ಷ ಅಮೆಜಾನ್‌ ಪ್ರೈಮ್‌ನಲ್ಲಿ ತೆರೆಕಂಡ ‘ಶಕುಂತಲಾ ದೇವಿ’ ವಿದ್ಯಾ ಬಾಲನ್ ಅವರ ಕೊನೆಯ ಚಿತ್ರವಾಗಿದ್ದು, ಅಮಿತ್‌ ಮಸುರ್ಕರ್‌ ನಿರ್ದೇಶನದ ‘ಶೆರಿನ್‌’ ಚಿತ್ರದಲ್ಲಿ ಅರಣ್ಯ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

error: Content is protected !!