ವರನಟ, ನಟಸಾರ್ವಭೌಮ ಡಾ. ರಾಜ್ ಕುಮಾರ್ ಅವರ 15ನೇ ಪುಣ್ಯತಿಥಿ: ಅಣ್ಣಾವ್ರನ್ನು ಸ್ಮರಿಸಿದ ಸಿಎಂ ಯಡಿಯೂರಪ್ಪ - BC Suddi
ವರನಟ, ನಟಸಾರ್ವಭೌಮ ಡಾ. ರಾಜ್ ಕುಮಾರ್ ಅವರ 15ನೇ ಪುಣ್ಯತಿಥಿ: ಅಣ್ಣಾವ್ರನ್ನು ಸ್ಮರಿಸಿದ ಸಿಎಂ ಯಡಿಯೂರಪ್ಪ

ವರನಟ, ನಟಸಾರ್ವಭೌಮ ಡಾ. ರಾಜ್ ಕುಮಾರ್ ಅವರ 15ನೇ ಪುಣ್ಯತಿಥಿ: ಅಣ್ಣಾವ್ರನ್ನು ಸ್ಮರಿಸಿದ ಸಿಎಂ ಯಡಿಯೂರಪ್ಪ

ಬೆಂಗಳೂರು: ವರನಟ, ನಟಸಾರ್ವಭೌಮ ಡಾ ರಾಜ್ ಕುಮಾರ್ ಅವರ 15ನೇ ಪುಣ್ಯತಿಥಿ ಹಿನ್ನಲೆಯಲ್ಲಿ ಸಿಎಂ ಯಡಿಯೂರಪ್ಪ ಅವರು ಅಣ್ಣಾವ್ರನ್ನು ಸ್ಮರಿಸಿಕೊಂಡಿದ್ದಾರೆ. ಏಪ್ರಿಲ್ 12 ರಂದು ಡಾ ರಾಜ್ ಕುಮಾರ್ ಅವರ ಪುಣ್ಯ ತಿಥಿ. ಅಭಿಮಾನಿಗಳ ಪಾಲಿನ ದೇವರು ಅಣ್ಣಾವ್ರು ಅಗಲಿ ಇಂದಿಗೆ ಹದಿನೈದು ವರ್ಷ ಕಳೆದಿದೆ. ಈ ಸಂದರ್ಭದಲ್ಲಿ ಡಾ ರಾಜ್ ಅವರನ್ನು ಸಿಎಂ ನೆನೆಪಿಸಿಕೊಂಡು ಟ್ವಿಟ್ಟರ್‌ನಲ್ಲಿ ನಮನ ಸಲ್ಲಿಸಿದ್ದಾರೆ.

‘ಅಪ್ರತಿಮ ಕಲಾವಿದ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಕರ್ನಾಟಕ ರತ್ನ ಡಾ. ರಾಜ್ ಕುಮಾರ್ ಅವರ ಪುಣ್ಯತಿಥಿಯಂದು ಅವರಿಗೆ ಅಭಿಮಾನ ಪೂರ್ವಕ ನಮನಗಳು. ಕೋಟ್ಯಂತರ ಅಭಿಮಾನಿಗಳ ಪಾಲಿನ ನೆಚ್ಚಿನ ‘ಅಣ್ಣಾವ್ರು’, ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಕರ್ನಾಟಕದ ಸಾವಿರಾರು ಕೋಟಿ ರೂ.ಗಳನ್ನು ವಿಜಯೇಂದ್ರ ಲೂಟಿ ಮಾಡಿದ್ದಾರೆ: ಯತ್ನಾಳ್