ಇನ್ನೂ ಕೆಲವು ವಾರ ದೇಶ ಬಂದ್ ಮಾಡಿ ಎಂದ ಡಾ. ಫಾಸಿ - BC Suddi
ಇನ್ನೂ ಕೆಲವು ವಾರ ದೇಶ ಬಂದ್ ಮಾಡಿ ಎಂದ ಡಾ. ಫಾಸಿ

ಇನ್ನೂ ಕೆಲವು ವಾರ ದೇಶ ಬಂದ್ ಮಾಡಿ ಎಂದ ಡಾ. ಫಾಸಿ

ನ್ಯೂಯಾರ್ಕ್: ಇನ್ನೂ ಕೆಲವು ವಾರಗಳ ಕಾಲ ಭಾರತದಲ್ಲಿ ಲಾಕ್ ಡೌನ್ ಮಾಡಬೇಕು ಇದರಿಂದ ಕೊರೊನಾ ಸೋಂಕು ಹರಡುವಿಕೆ ಹಾಗೂ ಸಾವಿನ ಪ್ರಮಾಣ ತಡೆಗಟ್ಟಬಹುದು ಎಂದು ಅಮೆರಿಕ ಆಡಳಿತದ ಮುಖ್ಯ ವೈದ್ಯಕೀಯ ಸಲಹೆಗಾರ ಡಾ. ಆಂಥೋನಿ ಎಸ್ ಫಾಸಿ ಹೇಳಿದ್ದಾರೆ‌.

ಲಾಕ್ ಡೌನ್ ಕಷ್ಟ ಆಗಬಹುದು. ಆದ್ರೆ ಲಾಕ್ ಡೌನ್ ಮಾಡುವುದರಿಂದ ಈ ಮಟ್ಟಿಗಿನ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಸಮಯಾವಕಾಶ ಸಿಗುವುದು. ಸಮಸ್ಯೆಯನ್ನು ಹಂತಹಂತವಾಗಿ ಬಗೆಹರಿಸಲು ಯಾವುದು ತಕ್ಷಣ ಆಗಬೇಕು ಎಂಬುದನ್ನು ಆದ್ಯತೆ ಮೇರೆಗೆ ವಿಂಗಡಿಸಿ ಕ್ರಮ ಕೈಗೊಳ್ಳಬೇಕಿದೆ ಎಂದು ಡಾ. ಫಾಸಿ ಸಲಹೆ ನೀಡಿದ್ದಾರೆ‌.