2000 ವೈದ್ಯರ ನೇಮಕಕ್ಕೆ ನಾವು ರೆಡಿ: ಡಾ.ಕೆ.ಸುಧಾಕರ್.! - BC Suddi
2000 ವೈದ್ಯರ ನೇಮಕಕ್ಕೆ ನಾವು ರೆಡಿ: ಡಾ.ಕೆ.ಸುಧಾಕರ್.!

2000 ವೈದ್ಯರ ನೇಮಕಕ್ಕೆ ನಾವು ರೆಡಿ: ಡಾ.ಕೆ.ಸುಧಾಕರ್.!

 

ಬಳ್ಳಾರಿ : ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ತಿಂಗಳೊಳಗೆ 2000 ವೈದ್ಯರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಬಳ್ಳಾರಿ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ಉಪನ್ಯಾಸ, ಪರೀಕ್ಷಾ ಸಭಾಂಗಣ, ರಂಗಮಂದಿರ, ಹಾಸ್ಟೆಲ್ ನಿರ್ಮಾಣ ಶಂಕುಸ್ಥಾಪನೆಯನ್ನು ವರ್ಚುವಲ್ ಮೂಲಕ ನೆರವೇರಿಸಿ ಮಾತನಾಡಿದ ಸಚಿವರು, ತಿಂಗಳೊಳಗೆ 2000 ವೈದ್ಯರು ಹಾಗೂ 700 ಕ್ಕೂ ಹೆಚ್ಚು ಪ್ಯಾರಾಮೆಡಿಕಲ್ ಮತ್ತು ನರ್ಸಿಂಗ್ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಗ್ರಾಮೀಣಾ ಪ್ರದೇಶದ ವೈದ್ಯರಿಗೆ ಉತ್ತೇಜನ ನೀಡಲು ವೇತನ ಹೆಚ್ಚಳ, ಬಡ್ತಿ ನೀಡಲಾಗುವುದು. ಖಾಸಗಿ, ಸರ್ಕಾರಿ ಸಹಭಾಗಿತ್ವದಲ್ಲಿ ಆರೋಗ್ಯ ಕ್ಷೇತ್ರ ಬಲಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

error: Content is protected !!