ದೊಡ್ಡಬಳ್ಳಾಪುರ: ಮಗನಿಂದ ಸೆಕ್ಸ್‌ ದೋಖಾ: ಯುವತಿ ಕಿರುಕುಳಕ್ಕೆ ಮನವೊಂದು ಉದ್ಯಮಿ ಆತ್ಮಹತ್ಯೆಗೆ ಶರಣು - BC Suddi
ದೊಡ್ಡಬಳ್ಳಾಪುರ: ಮಗನಿಂದ ಸೆಕ್ಸ್‌ ದೋಖಾ: ಯುವತಿ ಕಿರುಕುಳಕ್ಕೆ ಮನವೊಂದು ಉದ್ಯಮಿ ಆತ್ಮಹತ್ಯೆಗೆ ಶರಣು

ದೊಡ್ಡಬಳ್ಳಾಪುರ: ಮಗನಿಂದ ಸೆಕ್ಸ್‌ ದೋಖಾ: ಯುವತಿ ಕಿರುಕುಳಕ್ಕೆ ಮನವೊಂದು ಉದ್ಯಮಿ ಆತ್ಮಹತ್ಯೆಗೆ ಶರಣು

ದೊಡ್ಡಬಳ್ಳಾಪುರ: ಯುವತಿಯೊಬ್ಬಳು ಜೀವ ಬೆದರಿಕೆ, ಕಿರುಕುಳದಿಂದ ಮನನೊಂದ ಉದ್ಯಮಿ ನೇಣಿಗೆ ಶರಣಾಗಿರುವ ಘಟನೆ ದೊಡ್ಡಬಳ್ಳಾಪುರದ ಕರೇನಹಳ್ಳಿಯಲ್ಲಿ ನಡೆದಿದೆ. ರಾಜಣ್ಣ (55) ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ. ರಾಜಣ್ಣ ಅವರು ತಮ್ಮ ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ರಾಜಣ್ಣ ಅವರ ಮಗ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದು, ಈ ಸಮಯದಲ್ಲಿ ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡು ಆಕೆಯೊಂದಿಗೆ ಲೈಂಗಿಕ ಸಂಪರ್ಕ ಮಾಡಿದ್ದ. ಈ ಸಂಬಂಧ 2019ರ ಮೇ 7ರಂದು ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಬಂಧನವಾಗಿದ್ದ ಆರೋಪಿ ಗೌತಮ್ ಮತ್ತು ರಾಜಣ್ಣ ಬೇಲ್ ಪಡೆದು ಜೈಲಿನಿಂದ ಹೊರ ಬಂದಿದ್ದರು.

ಸಂತ್ರಸ್ತೆಯು ಕೆಲ ದಿನಗಳ ಹಿಂದೆ ಜನ್ಮ ನೀಡಿದ್ದು, ಮಗುವಿನ ತಂದೆ ಗೌತಮ್ ಎಂಬುದನ್ನು ಸಾಬೀತುಪಡಿಸಲು ಡಿಎನ್​ಎ ಟೆಸ್ಟ್ ನಡೆಯಲಿದೆ. ಈ ನಡುವೆ ಆರೋಪಿಗಳು ಸಂತ್ರಸ್ತೆಗೆ ಜೀವ ಬೆದರಿಕೆಯೊಡ್ಡಿ ಕಿರುಕುಳ ನೀಡಿ ಕೇಸ್ ವಾಪಸ್ ಪಡೆಯುವಂತೆ ಬೆದರಿಕೆ ಹಾಕಿದ್ದಾಗಿ 2021ರ ಮಾರ್ಚ್​ 28ರಂದು ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿತ್ತು.

“ಯುವತಿಯು ಮಾರ್ಚ್ 30ರಂದು ಮನೆಗೆ ಬಂದು ನಿನ್ನ ಮೇಲೆ ಎರಡು ಕೇಸ್ ಇದ್ದರೂ ಬದುಕಿದ್ದೀಯಾ ಎಂದು ಪತಿಗೆ ನಿಂದಿಸಿದ್ದಾಳೆ. ಇದರಿಂದ ನೊಂದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಾವಿಗೆ ಯುವತಿಯೇ ಕಾರಣ’ ಎಂದು ರಾಜಣ್ಣ ಅವರ ಪತ್ನಿ ಆರೋಪಿಸಿದ್ದಾರೆ. ಜೊತೆಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

error: Content is protected !!