ಬೆಂಗಳೂರು: ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವೈರಲ್ ಆಗುತ್ತಿರುವ ವಿಡಿಯೋಗಳು ಎಲ್ಲಿಂದ ಅಪ್ಲೋಡ್ ಆಗಿದ್ದಾವೆ ಎನ್ನುವುದಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸುತ್ತಿರುವ ಪೊಲೀಸ್ ಇಲಾಖೆಗೆ ಮಹತ್ವದ ಮಾಹಿತಿಯೊಂದು ದೊರಕಿದೆ ಎನ್ನಲಾಗಿದೆ.
ಅಂದ ಹಾಗೇ ಪೊಲೀಸರ ಪ್ರಾಥಮಿಕ ತನಿಖೆಯಿಂದ ಮಂಗಳವಾರ ಮಧ್ಯಾಹ್ನ 2:20ರ ವೇಳೆಗೆ ರಷ್ಯಾದಿಂದ ವಿಡಿಯೋ ಅಪ್ಲೋಡ್ ಮಾಡಿದ್ದಾರೆ ಎನ್ನಲಾಗಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿ ಅವಶ್ಯಕತೆ ಇರುವ ಕಾರಣದಿಂದ ಬೆಂಗಳೂರು ಪೊಲೀಸರು ವಿಡಿಯೋ ಎಲ್ಲಿಂದ. ಯಾರು ಯಾವ ಸಮಯದಲ್ಲಿ ಯ್ಯೂಟ್ಯೂಬ್ಗೆ ಅಪ್ಲೋಡ್ ಮಾಡಿದ್ದಾರೆ ಎನ್ನುವುದರ ಮಾಹಿತಿಗಾಗಿ ಪೊಲೀಸರು ಯೂಟ್ಯೂಬ್ಗೆ ಪತ್ರ ಬರೆದಿದ್ದು, ಅವಶ್ಯಕ ಮಾಹಿತಿಗಳನ್ನು ಪಡೆದುಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.