'ಮೇ 4ರ ವರೆಗೆ ಕಠಿಣ ಕ್ರಮ ಜಾರಿ, ಲಾಕ್‍ಡೌನ್ ಕುರಿತು ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ' - ಜಗದೀಶ್ ಶೆಟ್ಟರ್ - BC Suddi
‘ಮೇ 4ರ ವರೆಗೆ ಕಠಿಣ ಕ್ರಮ ಜಾರಿ, ಲಾಕ್‍ಡೌನ್ ಕುರಿತು ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ’ – ಜಗದೀಶ್ ಶೆಟ್ಟರ್

‘ಮೇ 4ರ ವರೆಗೆ ಕಠಿಣ ಕ್ರಮ ಜಾರಿ, ಲಾಕ್‍ಡೌನ್ ಕುರಿತು ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ’ – ಜಗದೀಶ್ ಶೆಟ್ಟರ್

ಧಾರವಾಡ: ಈಗಿನ ಮಾರ್ಗಸೂಚಿಯ ಪ್ರಕಾರ ಮೇ 4ರ ವರೆಗೆ ಕಠಿಣ ನಿಯಮ ಜಾರಿಯಲ್ಲಿರುತ್ತದೆ, ಲಾಕ್‍ಡೌನ್ ಬಗ್ಗೆ ನಾಳೆಯ ಕ್ಯಾಬಿನೆಟ್ ಸಭೆಯಲ್ಲಿ ವಿಸ್ತಾರವಾಗಿ ಚರ್ಚೆ ನಡೆಯಲಿದೆ” ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸೋಮವಾರ ಬೆಳಗ್ಗೆ 11ಕ್ಕೆ ಸಚಿವ ಸಂಪುಟ ಸಭೆ ನಡೆಯಲಿದ್ದು, ಕ್ಯಾಬಿನೆಟ್‍ನಲ್ಲಿ ಚರ್ಚಿಸಿದ ನಂತರ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತಾರೆ. ಕಟ್ಟುನಿಟ್ಟಿನ ನಿಯಮ ಹಾಕದಿದ್ದರೆ ಕೊರೊನಾ ನಿಯಂತ್ರಣ ಆಗುವುದಿಲ್ಲ. ಧಾರ್ಮಿಕ ಕಾರ್ಯಕ್ರಮ, ಜಾತ್ರೆ, ಮದುವೆಗೆ ಸಾವಿರಾರು ಜನ ಹೊರಡುತ್ತಿದ್ದು, ಅದನ್ನು ನಿಯಂತ್ರಿಸಬೇಕಿದೆ” ಎಂದರು.

ಇನ್ನು ಕಠಿಣ ನಿಯಮದಿಂದ ವ್ಯಾಪಾರಕ್ಕೆ ತೊಂದರೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಕಳೆದ ವರ್ಷ 3 ತಿಂಗಳು ಲಾಕ್‍ಡೌನ್ ಇತ್ತು, ಈಗ ಕೇವಲ 8-10 ದಿನದ ಲಾಕ್‍ಡೌನ್ ಅಷ್ಟೇ ಇದೆ. ಹಿಂದಿನ ವರ್ಷಕ್ಕಿಂತ ಈಗ ಕೊರೊನಾ ಜಾಸ್ತಿ ಇದೆ” ಎಂದು ಹೇಳಿದ್ದಾರೆ.

ಕೊರೊನಾ ಸೋಂಕಿನಿಂದ ಅರುಣ್ ಚೌಧರಿ ಸಾವು