ಮಾರುವೇಷದಲ್ಲಿ ದರ್ಶನ್ ಚಿತ್ರಮಂದಿರಕ್ಕೆ ತೆರಳಿ ಏನು ಮಾಡಿದ್ರು ಗೊತ್ತಾ..? - BC Suddi
ಮಾರುವೇಷದಲ್ಲಿ ದರ್ಶನ್ ಚಿತ್ರಮಂದಿರಕ್ಕೆ ತೆರಳಿ ಏನು ಮಾಡಿದ್ರು ಗೊತ್ತಾ..?

ಮಾರುವೇಷದಲ್ಲಿ ದರ್ಶನ್ ಚಿತ್ರಮಂದಿರಕ್ಕೆ ತೆರಳಿ ಏನು ಮಾಡಿದ್ರು ಗೊತ್ತಾ..?

ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಅಭಿಮಾನಿಗಳು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಈ ನಡುವೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಾರಿಗೂ ಗೊತ್ತಾಗದ ಹಾಗೆ ಮಾರುವೇಷದಲ್ಲಿ ಚಿತ್ರಮಂದಿರಕ್ಕೆ ತೆರಳಿ ಅಭಿಮಾನಿಗಳ ನಡುವೆ ಕುಳಿತು ಸಿನಿಮಾ ವೀಕ್ಷಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸುತ್ತಿರುವ ರಾಬರ್ಟ್ 4 ದಿನಗಳಲ್ಲೇ 50 ಕೋಟಿ ಕ್ಲಬ್ ಸೇರುವ ಮೂಲಕ ದಾಖಲೆ ನಿರ್ಮಿಸಿದೆ.

ಯಾರಿಗೂ ಗೊತ್ತಾಗದಂತೆ ಅಭಿಮಾನಿಗಳ ಮಧ್ಯೆ ಕುಳಿತು ರಾಬರ್ಟ್ ನೋಡಿದ ದರ್ಶನ್ . ಅಭಿಮಾನಿಗಳ ಶಿಳ್ಳೆ, ಚಪ್ಪಾಳೆಗಳನ್ನು ಕೇಳಿಕೊಂಡು ಎಂಜಾಯ್ ಮಾಡಿರುವ ದರ್ಶನ್ ಮುಂದಿನ ಸಿನಿಮಾದಲ್ಲಿ ಶಿಳ್ಳೆ, ಚಪ್ಪಾಳೆ ಹೆಚ್ಚಾಗಿ ಬರುವ ದೃಶ್ಯಗಳ ಕಡೆ ಗಮನ ಹರಿಸುವುದಾಗಿ ಹೇಳಿದ್ದಾರೆ. ಇದರ ಕುರಿತು ಮಾತನಾಡಿದ ಡಿ ಬಾಸ್ ದರ್ಶನ್, ಮಾರುವೇಷದಲ್ಲಿ ಸಿನಿಮಾ ವೀಕ್ಷಿಸಿದ ಬಗ್ಗೆ ವಿವರಿಸಿದ್ದಾರೆ. ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ನಟನೆ, ತೊದಲು ಮಾತು ಖುಷಿ ಕೊಟ್ಟಿದೆ ಎಂದಿದ್ದಾರೆ.

ಇದೇ ಸಮಯದಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ಬಿರುದಿನ ಬಗ್ಗೆ ಮಾತನಾಡಿದ ಡಿ ಬಾಸ್ ಬಾಕ್ಸ್ ಆಫೀಸ್ ಸುಲ್ತಾನ ಬಿರುದನ್ನು ಮೊದಲ ಬಾರಿಗೆ ಪತ್ರಕರ್ತರಾದ ವಿಜಯ್ ಸಾರಥಿಯವರು ಬರೆದಿದ್ದರು. ರಾಬರ್ಟ್ ಸಿನಿಮಾ ಯಶಸ್ಸಿನ ಖುಷಿಯನ್ನು ಇಡೀ ತಂಡ ಎಂಜಾಯ್ ಮಾಡುತ್ತಿದೆ. ಕನ್ನಡ ಮತ್ತು ತೆಲುಗಿನಲ್ಲಿ ಅದ್ದೂರಿಯಾಗಿ ಬಿಡುಗಡೆಯಾದ ರಾಬರ್ಟ್ ಸಿನಿಮಾದ ವಿಜಯಯಾತ್ರೆ ನಾಲ್ಕನೇ ದಿನವೂ ಮುಂದುವರೆದಿದೆ.

error: Content is protected !!