ಏ.29 ರಂದು ಧರ್ಮಸ್ಥಳದಲ್ಲಿ ನಡಯುವ ಉಚಿತ ಸಾಮೂಹಿಕ ವಿವಾಹ ರದ್ದು - BC Suddi
ಏ.29 ರಂದು ಧರ್ಮಸ್ಥಳದಲ್ಲಿ ನಡಯುವ ಉಚಿತ ಸಾಮೂಹಿಕ ವಿವಾಹ ರದ್ದು

ಏ.29 ರಂದು ಧರ್ಮಸ್ಥಳದಲ್ಲಿ ನಡಯುವ ಉಚಿತ ಸಾಮೂಹಿಕ ವಿವಾಹ ರದ್ದು

ಬೆಂಗಳೂರು: ಸರ್ಕಾರದ ಮಾರ್ಗಸೂಚಿ ಅನ್ವಯ ಏಪ್ರಿಲ್ 29ರಂದು ಸಂಜೆ 6:48 ರ ಗೋಧೂಳಿ ಮುಹೂರ್ತದಲ್ಲಿ ನಡೆಯಬೇಕಿದ್ದ 49ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭವನ್ನು ರದ್ದುಗೊಳಿಸಲಾಗಿದೆ. ಈ ವಿಷಯವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ತಿಳಿಸಿದ್ದಾರೆ.

ಆದರೆ ಸಾಮೂಹಿಕ ವಿವಾಹ ಸಮಾರಂಭದಲ್ಲಿ ವಧು-ವರರಿಗೆ ನೀಡಲಾಗುತ್ತಿದ್ದ ನೆರವನ್ನು ಮುಂದುವರೆಸಲು ತೀರ್ಮಾನಿಸಲಾಗಿದ್ದು, ಹೆಸರು ನೋಂದಾಯಿಸಿಕೊಂಡಿರುವ ವಧು-ವರರಿಗೆ ಮಂಗಳ ಸೂತ್ರ, ಸೀರೆ, ರವಿಕೆ ಕಣ, ಧೋತಿ ಮೊದಲಾದ ವಸ್ತುಗಳನ್ನು ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕರ್ತರ ಮೂಲಕ ವಧುವಿನ ಮನೆಗೆ ತಲುಪಿಸಲಾಗುತ್ತದೆ.

ವಧು-ವರರು ಮಾರ್ಚ್ 29ರ ಗೋಧೂಳಿ ಲಗ್ನದಲ್ಲಿ ಅಥವಾ ತಮಗೆ ಅನುಕೂಲವಾದ ದಿನ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ ವೈವಾಹಿಕ ಬದುಕಿಗೆ ಕಾಲಿಡಬಹುದು ಎಂದು ತಿಳಿಸಲಾಗಿದೆ.