ಧಾರವಾಡ ಜಿಲ್ಲೆಯಲ್ಲಿ ಇಂದಿನಿಂದ ಕಠಿಣ ನಿಯಮ ಜಾರಿಯಾಗಿದ್ದರೂ ಕೂಡ ಜನರು ಮಾತ್ರ ಡೋಂಟ್ ಕೇರ್ - BC Suddi
ಧಾರವಾಡ ಜಿಲ್ಲೆಯಲ್ಲಿ ಇಂದಿನಿಂದ ಕಠಿಣ ನಿಯಮ ಜಾರಿಯಾಗಿದ್ದರೂ ಕೂಡ ಜನರು ಮಾತ್ರ ಡೋಂಟ್ ಕೇರ್

ಧಾರವಾಡ ಜಿಲ್ಲೆಯಲ್ಲಿ ಇಂದಿನಿಂದ ಕಠಿಣ ನಿಯಮ ಜಾರಿಯಾಗಿದ್ದರೂ ಕೂಡ ಜನರು ಮಾತ್ರ ಡೋಂಟ್ ಕೇರ್

ಹುಬ್ಬಳ್ಳಿ: ಕೊರೋನಾ ಎರಡನೇ ಅಲೆ ಪ್ರಾರಂಭವಾದ ಹಿನ್ನಲೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಇಂದಿನಿಂದ ಕಠಿಣ ನಿಯಮ ಜಾರಿಯಾಗಿದ್ದರೂ ಕೂಡ ಜನರು ಮಾತ್ರ ಡೋಂಟ್ ಕೇರ್ ಎನ್ನುತ್ತಿದ್ದಾರೆ. ಬಾರ್,ಪಬ್,ಸ್ವಿಮ್ಮಿಂಗ್ ಫೂಲ್ ಬಂದ್ ಮಾಡಲಾಗಿದ್ದು,ಅಲ್ಲದೆ ಚಿತ್ರಮಂದಿರದಲ್ಲಿ 50 ಪರ್ಸೆಂಟ ಮಾತ್ರ ಅವಕಾಶ ನೀಡಿ ಕೊರೋನಾ ತಡೆಗಟ್ಟಲು ಸರ್ಕಾರದ ನಿಯಮ ಮಾಡಿದರು ಕೂಡ ಜನರು ಯಾವುದೇ ಭಯವಿಲ್ಲದೇ ಓಡಾಡುತ್ತಿದ್ದಾರೆ.

ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣದಲ್ಲಿ ದೈಹಿಕ ಅಂತರ, ಮಾಸ್ಕ್ ಧರಿಸದೇ ನಿಯಮ ಉಲ್ಲಂಘನೆ ಮಾಡಲಾಗಿದ್ದು, ಜನರು ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಇನ್ನೂ ಬಸ್ ಕೂಡ ಫುಲ್ ರಷ್ ಆಗಿವೆ. ಬಸ್ ಚಾಲಕ, ನಿರ್ವಾಹಕರು ಮಾಸ್ಕ ಧರಿಸದೆ ಚಾಲನೆ ಮಾಡುತ್ತಿರುವುದು ಕೂಡ ಕಂಡುಬಂದಿದೆ.

ಬಸ್ ಬಲ್ಲಿ ಆಸನ ವ್ಯವಸ್ಥೆಯಷ್ಟೆ ಜನ ಇರಬೇಕು ಎಂದು ರೂಲ್ಸ್‌ ಇದ್ದರೂ ಡೋಂಟ್ ಕೇರ್‌‌ ಎನ್ನುವಂತಾಗಿದೆ. ಇಷ್ಟೆಲ್ಲಾ ಆದರೂ ಇನ್ನು ಅಧಿಕಾರಿಗಳು ಮಾತ್ರ ಫೀಲ್ಡ್ ಗೆ ಇಳಿದಿಲ್ಲ.ಜಿಲ್ಲಾಡಳಿತ ಹಾಗೂ ಸ್ಥಳೀಯ ಮಹಾನಗರ ಪಾಲಿಕೆಯಿಂದ ದಿವ್ಯ ನಿರ್ಲಕ್ಷ್ಯದಿಂದ ಸರ್ಕಾರದ ನಿಯಮ ಮಾತ್ರ ಪಾಲನೆ ಆಗುತ್ತಿಲ್ಲ.

error: Content is protected !!