'ಸಿಎಂ ನನ್ನ ವಿರುದ್ಧ ತನಿಖೆಗೆ ಆದೇಶಿಸಿದರೆ ಸ್ವಾಗತಿಸುತ್ತೇನೆ' - ಮಹಾರಾಷ್ಟ್ರ ಗೃಹಸಚಿವ ದೇಶ್‌ಮುಖ್‌ - BC Suddi
‘ಸಿಎಂ ನನ್ನ ವಿರುದ್ಧ ತನಿಖೆಗೆ ಆದೇಶಿಸಿದರೆ ಸ್ವಾಗತಿಸುತ್ತೇನೆ’ – ಮಹಾರಾಷ್ಟ್ರ ಗೃಹಸಚಿವ ದೇಶ್‌ಮುಖ್‌

‘ಸಿಎಂ ನನ್ನ ವಿರುದ್ಧ ತನಿಖೆಗೆ ಆದೇಶಿಸಿದರೆ ಸ್ವಾಗತಿಸುತ್ತೇನೆ’ – ಮಹಾರಾಷ್ಟ್ರ ಗೃಹಸಚಿವ ದೇಶ್‌ಮುಖ್‌

ಮುಂಬೈ:  ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಅವರು ನನ್ನ ವಿರುದ್ಧ ಮಾಡಿರುವ ಭ್ರಷ್ಟಾಚಾರ ಆರೋಪದ ಬಗ್ಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತನಿಖೆಗೆ ಆದೇಶಿಸಿದರೆ ನಾನು ಅದನ್ನು ಸ್ವಾಗತಿಸುತ್ತೇನೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರು ಗುರುವಾರ ಹೇಳಿದ್ದಾರೆ.

ದೇಶ್ಮುಖ್ ತನಿಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರು, ಮುಂಬೈನ ದಾದ್ರಾ ಮತ್ತು ನಗರ ಹವೇಲಿ ಸಂಸದ ಮೋಹನ್ ಡೆಲ್ಕರ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿಯ ಕೈವಾಡವಿದೆ ಎಂದು ಹೇಳುವಂತೆ ಒತ್ತಡ ಹೇರುತ್ತಿದ್ದರು, ವರ್ಗಾವಣೆ ಮತ್ತು ಪೋಸ್ಟಿಂಗ್‌ ವಿಚಾರದಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ಈಗ ಅಮಾನತುಗೊಂಡಿರುವ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಸಚಿನ್ ವಾಝೆ ಅವರಲ್ಲಿ ಪ್ರತಿ ತಿಂಗಳು 100 ಕೋಟಿ ರೂ. ಸಂಗ್ರಹಿಸಲು ಹೇಳಿದ್ದಾರೆ” ಎಂದು ಪರಮ್ ಬಿರ್ ಸಿಂಗ್ ಆರೋಪಿಸಿದ್ದರು. ಈ ಬಗ್ಗೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಬುಧವಾರ ಸುಪ್ರೀಂ ಕೋರ್ಟ್, ”ಈ ಪ್ರಕರಣ ಗಂಭೀರವಾದುದು ಆದರೆ ಹೈಕೋರ್ಟ್‌ಗೆ ಹೋಗಿ” ಎಂದು ಹೇಳಿತ್ತು.

ಸಿಡಿ ಲೇಡಿಯಿಂದ ಮತ್ತೊಂದು ವಿಡಿಯೋ ರಿಲೀಸ್ : ಎಸ್‌ಐಟಿ ಮೇಲೆ ಗಂಭೀರ ಆರೋಪ

ಈ ಎಲ್ಲಾ ಬೆಳವಣಿಗೆಗಳ ಬಳಿಕ ಬುಧವಾರ ಮಧ್ಯರಾತ್ರಿ ಟ್ವೀಟ್‌ ಮಾಡಿರುವ ಅನಿಲ್ ದೇಶ್‌ಮುಖ್, ಮಾರ್ಚ್ 21 ರಂದು ತಾವು ಠಾಕ್ರೆ ಅವರಿಗೆ ಬರೆದ ಪತ್ರದ ಪ್ರತಿಯನ್ನು ಹಂಚಿಕೊಂಡಿದ್ದಾರೆ. ”ನನ್ನ ವಿರುದ್ಧ ಪರಮ್ ಬಿರ್ ಸಿಂಗ್ ಅವರು ಮಾಡಿರುವ ಆರೋಪದ ಬಗ್ಗೆ ತನಿಖೆಗೆ ಆದೇಶಿಸುವಂತೆ ನಾನು ಗೌರವಾನ್ವಿತ ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದೇನೆ. ಗೌರವಾನ್ವಿತ ಮುಖ್ಯಮಂತ್ರಿಗಳು ತನಿಖೆಗೆ ಆದೇಶಿಸಿದರೆ ನಾನು ಸ್ವಾಗತಿಸುತ್ತೇನೆ. ಸತ್ಯಮೇವ್ ಜಯತೆ” ಎಂದು ಹೇಳಿದ್ದಾರೆ. ಹಾಗೆಯೇ ”ನನ್ನ ವಿರುದ್ಧ ಮಾಡಿರುವ ಆರೋಪಗಳಲ್ಲಿ ಸತ್ಯವಿಲ್ಲ. ಆದ್ದರಿಂದ ತನಿಖೆಗೆ ಯಾವುದೇ ಭಯವಿಲ್ಲ” ಎಂದೂ ಹೇಳಿದ್ದಾರೆ.

error: Content is protected !!