ಬ್ಯಾಡ್ಮಿಂಟನ್ ದಂತಕತೆ ಪ್ರಕಾಶ್ ಪಡುಕೋಣೆ ಆಸ್ಪತ್ರೆಗೆ ದಾಖಲು - BC Suddi
ಬ್ಯಾಡ್ಮಿಂಟನ್ ದಂತಕತೆ ಪ್ರಕಾಶ್ ಪಡುಕೋಣೆ ಆಸ್ಪತ್ರೆಗೆ ದಾಖಲು

ಬ್ಯಾಡ್ಮಿಂಟನ್ ದಂತಕತೆ ಪ್ರಕಾಶ್ ಪಡುಕೋಣೆ ಆಸ್ಪತ್ರೆಗೆ ದಾಖಲು

ಬೆಂಗಳೂರು: ಬ್ಯಾಡ್ಮಿಂಟನ್ ದಂತಕತೆ, ಬಾಲಿವುಡ್ ನಟಿ ದೀಪಿಕಾ ತಂದೆ ಪ್ರಕಾಶ್ ಪಡುಕೋಣೆ ಅವರು ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ.

65ರ ಹರೆಯದ ಪ್ರಕಾಶ್‌ ಹಾಗೂ ಅವರ ಪತ್ನಿ ಉಜ್ವಲಾ ಮತ್ತು ದ್ವಿತೀಯ ಪುತ್ರಿ ಅನಿಶಾ ಅವರಿಗೆ ಸುಮಾರು 10 ದಿನಗಳ ಹಿಂದೆಯಷ್ಟೇ ಕೊರೊನಾ ವೈರಸ್ ಲಕ್ಷಣಗಳು ಕಾಣಿಸಿಕೊಂಡಿದ್ದವು. ಹೀಗಾಗಿ ಅವರು ಪರೀಕ್ಷಿಸಿದಾಗ ಅವರಿಗೆ ಕೊರೊನಾ ಸೋಂಕಿರುವುದು ಕಂಡುಬಂದಿತ್ತು ಎಂದು ಪ್ರಕಾಶ್ ಅವರ ಸ್ನೇಹಿತ ವಿಮಲ್ ಕುಮಾರ್ ಮಾಹಿತಿ ನೀಡಿದ್ದಾರೆ.

ಪ್ರಕಾಶ್ ಆರೋಗ್ಯ ಸ್ಥಿತಿ ಈಗ ಸುಧಾರಿಸಿದೆ. ಪ್ರಕಾಶ್ ಅವರ ಪತ್ನಿ ಮತ್ತು ಪುತ್ರಿ ಸದ್ಯ ಮನೆಯಲ್ಲಿದ್ದಾರೆ. ಪ್ರಕಾಶ್ ಕೂಡ 2-3 ದಿನಗಳಲ್ಲಿ ಡಿಸ್ಚಾರ್ಜ್ ಆಗಲಿದ್ದಾರೆ. ಲಸಿಕೆಯ ಮೊದಲ ಡೋಸ್‍ಅನ್ನು ಪ್ರಕಾಸ್ ಅವರು ಪಡೆದುಕೊಂಡಿದ್ದಾರೆ ಎಂದು ವಿಮಲ್ ಹೇಳಿದ್ದಾರೆ.