ದ್ವಿತೀಯ ಪಿಯು ಶೈಕ್ಷಣಿಕ ವರ್ಷಾ ಆರಂಭಿಸಲು ಶಿಕ್ಷಣ ಇಲಾಖೆ ಸೂಚನೆ.! - BC Suddi
ದ್ವಿತೀಯ ಪಿಯು ಶೈಕ್ಷಣಿಕ ವರ್ಷಾ ಆರಂಭಿಸಲು ಶಿಕ್ಷಣ ಇಲಾಖೆ ಸೂಚನೆ.!

ದ್ವಿತೀಯ ಪಿಯು ಶೈಕ್ಷಣಿಕ ವರ್ಷಾ ಆರಂಭಿಸಲು ಶಿಕ್ಷಣ ಇಲಾಖೆ ಸೂಚನೆ.!

 

 

ಬೆಂಗಳೂರು : ಪದವಿ ಪೂರ್ಣ ಶಿಕ್ಷಣ ಇಲಾಖೆ ಯು ಬರುವ  ಆಗಸ್ಟ್ ನಲ್ಲಿ 2021-22 ನೇ ಸಾಲಿನ ದ್ವಿತೀಯ ಪಿಯು ಶೈಕ್ಷಣಿಕ ವರ್ಷಾ ಆರಂಭಿಸಲು ನಿರ್ಧರಿಸಲಾಗಿದೆ.  ಆಗಸ್ಟ್ 2 ರಿಂದ ದ್ವಿತೀಯ ಪಿಯು ದಾಖಲಾತಿ ಹಾಗೂ ತರಗತಿಗಳು ಆರಂಭವಾಗಲಿವೆ ಎಂದು ಸುತ್ತೋಲೆ ಹೊರಡಿಸಿದೆ.

ಪದವಿ ಪೂರ್ವ ಶಿಕ್ಷಣ ಇಲಾಖೆಯು ಪ್ರಸಕ್ತ ಸಾಲಿನ ಪಿಯು ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಮೇ. 24 ರಿಂದ ಜೂ. 16 ರವರೆಗೆ ದ್ವಿತೀಯ ಪಿಯು ಪರೀಕ್ಷೆ ನಿಗದಿಪಡಿಸಿ ವೇಳಾಪಟ್ಟಿ ಪ್ರಕಟಿಸಲಾಗಿದೆ. ಮಾರ್ಚ್ 25-27 ರವರೆಗೆ ಕಾಲೇಜು ಹಂತದಲ್ಲಿಯೇ ಪ್ರಥಮ ಹಾಗೂ ದ್ವಿತೀಯ ಪಿಯು ಕ್ಲಾಸ್ ಗಳಿಗೆ ಕಿರು ಪರೀಕ್ಷೆ ನಡೆಯಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.

ಜುಲೈ 5 ರಿಂದ 17 ರವರೆಗೆ ಪ್ರಥಮ ಪಿಯು ವಾರ್ಷಿಕ ಪರೀಕ್ಷೆಗಳನ್ನು ಕಾಲೇಜು ಹಂತದಲ್ಲಿಯೇ ನಡೆಸಲಾಗುತ್ತದೆ. ನಂತರ ಜು. 28 ರವರೆಗಿನ ಅವಧಿಯಲ್ಲಿ ಪ್ರಥಮ ಪಿಯು ಮೌಲ್ಯಮಾಪನ, ಫಲಿತಾಂಶ ಅನುಮೋದನೆ ಪಡೆದು ಜು. 30 ರಂದು ಘೋಷಿಸಲಾಗುತ್ತದೆ ಎಂದು ಪಿಯು ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !!