ಕುಸ್ತಿಪಟು ಸುಶೀಲ್ ಕುಮಾರ್‌ ಬಂಧನಕ್ಕೆ ಅವರ ಮನೆಯ ಮೇಲೆ ದಾಳಿ ನಡೆಸಿದ ದೆಹಲಿ ಪೊಲೀಸರು - BC Suddi
ಕುಸ್ತಿಪಟು ಸುಶೀಲ್ ಕುಮಾರ್‌ ಬಂಧನಕ್ಕೆ ಅವರ ಮನೆಯ ಮೇಲೆ ದಾಳಿ ನಡೆಸಿದ ದೆಹಲಿ ಪೊಲೀಸರು

ಕುಸ್ತಿಪಟು ಸುಶೀಲ್ ಕುಮಾರ್‌ ಬಂಧನಕ್ಕೆ ಅವರ ಮನೆಯ ಮೇಲೆ ದಾಳಿ ನಡೆಸಿದ ದೆಹಲಿ ಪೊಲೀಸರು

ನವದೆಹಲಿ: ಮಾಜಿ ಕಿರಿಯ ರಾಷ್ಟ್ರೀಯ ಚಾಂಪಿಯನ್, 23 ವರ್ಷದ ಸಾಗರ್ ರಾಣಾ ಅವರನ್ನು ಹತ್ಯೆ ಪ್ರಕರಣದಲ್ಲಿ ದೆಹಲಿ ಪೊಲೀಸರು ಕುಸ್ತಿಪಟು ಸುಶೀಲ್ ಕುಮಾರ್‌ ಬಂಧನಕ್ಕೆ ಅವರ ಮನೆಯ ಮೇಲೆ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಹೆಚ್ಚುವರಿ ಡಿಸಿಪಿ (ವಾಯುವ್ಯ ಜಿಲ್ಲೆ) ಡಾ.ಗುರಿಕ್ಬಾಲ್ ಸಿಂಗ್ ಸಿಧು, ”ನಾವು ಎಲ್ಲ ಸಂತ್ರಸ್ತರ ಬಳಿ ಹೇಳಿಕೆ ಪಡೆದಿದ್ದು ಅವರೆಲ್ಲರೂ ಸುಶೀಲ್ ಕುಮಾರ್ ವಿರುದ್ಧ ಆರೋಪ ಮಾಡಿದ್ದಾರೆ. ಈ ಹಿನ್ನೆಲೆ ಸುಶೀಲ್ ಕುಮಾರ್ ವಿರುದ್ಧ ಕೊಲೆ, ಅಪಹರಣ, ಕ್ರಿಮಿನಲ್ ಪಿತೂರಿಯ ಎಫ್‌ಐಆರ್‌ ದಾಖಲಿಸಿದ್ದೇವೆ. ಅವರ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದೇವೆ” ಎಂದು ಹೇಳಿದ್ದಾರೆ.

ಸಾಗರ್‌ನನ್ನು ಸುಶೀಲ್ ಕುಮಾರ್‌ ಹಾಗೂ ಅವರ ಸಹಚರರು ಮಾಡೆಲ್ ಟೌನ್‌ನಲ್ಲಿರುವ ಅವರ ಮನೆಯಿಂದ ಅಪಹರಿಸಿ ಚತ್ರಸಲ್ ಸ್ಟೇಡಿಯಂ ಪಾರ್ಕಿಂಗ್ ಪ್ರದೇಶದಲ್ಲಿ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದ್ದು ಆ ಬಳಿಕ ಪರಾರಿಯಾಗಿದ್ದ ಸುಶೀಲ್ ಕುಮಾರ್‌ ಬಂಧನಕ್ಕೆ ದಿಲ್ಲಿ, ಉತ್ತರಾಖಂಡ ಹಾಗೂ ಹರ್ಯಾಣದ ಹೊರವಲಯದಲ್ಲಿ ದಿಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇನ್ನು “ಕ್ರೀಡಾಂಗಣದ ಪಾರ್ಕಿಂಗ್ ಪ್ರದೇಶದಲ್ಲಿ ಸುಶೀಲ್ ಕುಮಾರ್, ಅಜಯ್, ಪ್ರಿನ್ಸ್ ದಲಾಲ್, ಸೋನು, ಸಾಗರ್, ಅಮಿತ್ ಹಾಗೂ ಇತರರ ನಡುವೆ ಜಗಳ ನಡೆದಿದೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ” ಎಂದು ಕೂಡಾ ಡಾ.ಗುರಿಕ್ಬಾಲ್ ಸಿಂಗ್ ಸಿಧು ತಳಿಸಿದ್ದಾರೆ.

”ಗ್ಯಾಂಗ್ ಸ್ಟರ್ ಕಲಾ ಜಥೆಡಿಯವರ ಆಪ್ತರಾಗಿದ್ದ ಗಾಯಗೊಂಡ ಸೋನು ಮಹಲ್ ಸೇರಿದಂತೆ ಸಾಗರ್ ಹಾಗೂ ಅವರ ಕೆಲವು ಸ್ನೇಹಿತರು ಕ್ರೀಡಾಂಗಣದ ಸಮೀಪದ ಸುಶೀಲ್‌ಗೆ ಸಂಬಂಧಪಟ್ಟ ಮನೆಯೊಂದರಲ್ಲಿ ವಾಸವಾಗಿದ್ದರು. ಇತ್ತೀಚೆಗೆ ಸುಶೀಲ್‌ ಸಾಗರ್ ಹಾಗೂ ಇತರರರನ್ನು ಮನೆ ಖಾಲಿ ಮಾಡಲು ಹೇಳಿದ್ದರು. ಹಾಗೆಯೇ ಬಳಿಕ ಬಲವಂತವಾಗಿ ಹೊರಹಾಕಿದ್ದರು” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಕ್ಸಿಜನ್‌, ಲಸಿಕೆ ಪೂರೈಕೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡುತ್ತಿರುವ ತಾರತಮ್ಯ ಸರಿಯಲ್ಲ: ಸತೀಶ್ ಜಾರಕಿಹೊಳಿ