ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಅಧಿಕಾರಕ್ಕೆ ಭಾಗಶಃ ಕಡಿವಾಣ: 'ದೆಹಲಿ ಅಧಿಕಾರ' ರಾಜ್ಯಪಾಲ ತೆಕ್ಕೆಗೆ.! - BC Suddi
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಅಧಿಕಾರಕ್ಕೆ ಭಾಗಶಃ ಕಡಿವಾಣ: ‘ದೆಹಲಿ ಅಧಿಕಾರ’ ರಾಜ್ಯಪಾಲ ತೆಕ್ಕೆಗೆ.!

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಅಧಿಕಾರಕ್ಕೆ ಭಾಗಶಃ ಕಡಿವಾಣ: ‘ದೆಹಲಿ ಅಧಿಕಾರ’ ರಾಜ್ಯಪಾಲ ತೆಕ್ಕೆಗೆ.!

ನವದೆಹಲಿ: ದೆಹಲಿಯಲ್ಲಿ ಚುನಾಯಿತ ಸರ್ಕಾರದ ಅಧಿಕಾರವನ್ನು ಮಿತಿಗೊಳಿಸುವ ಕಾಯ್ದೆ ಜಾರಿಗೆ ಬಂದಿದ್ದು, ಇದರಿಂದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಅಧಿಕಾರಕ್ಕೆ ಭಾಗಶಃ ಕಡಿವಾಣ ಬಿದ್ದಿದೆ.

ರಾಷ್ಟ್ರೀಯ ರಾಜಧಾನಿ ದೆಹಲಿ (ತಿದ್ದುಪಡಿ) ಕಾಯ್ದೆ–2021 ಏ. 27ರಿಂದ ಜಾರಿಗೆ ಬಂದಿದೆ. ಈ ಕುರಿತು ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆ ಪ್ರಕಟಿಸಿದೆ. ಈ ಕಾಯ್ದೆ ಪ್ರಕಾರ, ಚುನಾಯಿತ ಸರ್ಕಾರಕ್ಕಿಂತ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಲೆಫ್ಟಿನೆಂಟ್‌ ಗವರ್ನರ್‌ಗೆ ಈ ಕಾಯ್ದೆ ಹೆಚ್ಚಿನ ಅಧಿಕಾರ ನೀಡುತ್ತದೆ. ಇನ್ನು ನಗರಕ್ಕೆ ಸಂಬಂಧಿಸಿ ಯಾವುದೇ ನಿರ್ಧಾರ ಕೈಗೊಳ್ಳಬೇಕಾದರೆ, ಅನುಷ್ಠಾನಕ್ಕಾಗಿ ಅಲ್ಲಿನ ಸರ್ಕಾರ ಲೆಫ್ಟಿನೆಂಟ್‌ ಗವರ್ನರ್‌ ಅವರ ಅಭಿಪ್ರಾಯದಂತೆ ನಡೆಯಬೇಕಾಗುತ್ತದೆ.

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆ ಈ ಮಸೂದೆಯನ್ನು ಮಾರ್ಚ್‌ 22ರಂದು ಲೋಕಸಭೆಯಲ್ಲಿ ಅಂಗೀಕರಿಸಲಾಯಿತು. ನಂತರ, ರಾಜ್ಯಸಭೆಯಲ್ಲಿ ಮಾರ್ಚ್‌ 24ರಂದು ಅಂಗೀಕರಿಸಲಾಯಿತು. ಇದಕ್ಕೆ ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಾರ್ಚ್ 28ರಂದು ಸಮ್ಮತಿ ನೀಡಿದ್ದರು.

ಜೈಪುರ : 7 ಲಕ್ಷ ರೂ. ವ್ಯಯಿಸಿ ಹೆಲಿಕಾಫ್ಟರ್‌‌‌ನಲ್ಲಿ ಕರೆತಂದು ವಧುವನ್ನು ಮನೆತುಂಬಿಸಿಕೊಂಡ ವರ