"ಇಂದಿರಾನಗರದ ಗೂಂಡಿ ನಾನು" ಎಂದು ಬಾಲ್ಯದ ಫೋಟೋ ಹಂಚಿಕೊಂಡ ದೀಪಿಕಾ ಪಡುಕೋಣೆ - BC Suddi
“ಇಂದಿರಾನಗರದ ಗೂಂಡಿ ನಾನು” ಎಂದು ಬಾಲ್ಯದ ಫೋಟೋ ಹಂಚಿಕೊಂಡ ದೀಪಿಕಾ ಪಡುಕೋಣೆ

“ಇಂದಿರಾನಗರದ ಗೂಂಡಿ ನಾನು” ಎಂದು ಬಾಲ್ಯದ ಫೋಟೋ ಹಂಚಿಕೊಂಡ ದೀಪಿಕಾ ಪಡುಕೋಣೆ

ಮುಂಬೈ: ಬಾಲಿವುಡ್ ನಟಿ ದಿಪೀಕಾ ಪಡುಕೋಣೆ ಬೆಂಗಳೂರಿಗರಾಗಿದ್ದು, ಈಗ ಇಂದಿರಾನಗರದ ಗೂಂಡಿ ನಾನು ಎಂದು ತಮ್ಮ ಬಾಲ್ಯದ ಪೋಟೊವೊಂದನ್ನು ಹಂಚಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಬಾಲ್ಯದ ಮುದ್ದಾದ ಪೋಟೊವೊಂದನ್ನು ಹಂಚಿಕೊಂಡು ಇಂದಿರಾನಗರದ ಗೂಂಡಿ ನಾನು ಎಂದು ಕ್ಯಾಪ್ಷನ್​ ನೀಡಿದ್ದಾರೆ.

ಇನ್ನು ಈ ನಟಿಯ ಬಾಲ್ಯದ ಚಿತ್ರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದು, ಲೈಕ್ಸ್ ಮತ್ತು ಕಮೆಂಟ್ ಗಳ ಸುರಿಮಳೆ ಹರಿದು ಬಂದಿದೆ. ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ, ರಾಹುಲ್ ದ್ರಾವಿಡ್ ಅವರು ಜಾಹೀರಾತಿನಲ್ಲಿ ‘ಇಂದಿರಾ ನಗರ ಗೂಂಡಾ ನಾನು’ ಎಂದು ಹೇಳಿದ್ದರು. ಈ ಜಾಹೀರಾತು ಸಾಕಷ್ಟು ಸುದ್ದಿ ಮಾಡುತ್ತಿದ್ದು, ಇದೀಗ ದೀಪಿಕಾ ಪಡುಕೋಣೆ ಕೂಡ ಇಂದಿರಾನಗರದ ಗೂಂಡಿ ನಾನು ಎಂದು ಹೇಳುವ ಮೂಲಕ ಟ್ವಿಸ್ಟ್ ಕೊಟ್ಟಿದ್ದಾರೆ

ಇನ್ನು ಇವೆರಡೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೆಂಡ್ ಆಗಿ ವೈರಲ್ ಆಗಿ ರಾಹುಲ್ ದ್ರಾವಿಡ್ ಮತ್ತು ದೀಪಿಕಾ ಪಡುಕೋಣೆ ಅಭಿಮಾನಿಗಳು ಕಮೆಂಟ್ ನ ಸುರಿಮಳೆ ಹರಿಸಿದ್ದಾರೆ.

ಕಾಂಗ್ರೆಸ್ ಖಾಲಿ ಡಬ್ಬಾ ಆಗಿರುವುದರಿಂದ ಹೆಚ್ಚು ಶಬ್ದ ಮಾಡುತ್ತಿದೆ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ ರವಿ